ಖನಗಾಂವ ಗ್ರಾಮದಲ್ಲಿ ನಿರ್ಮಿಸಲಾದ ಶಾಲಾ ಹೆಚ್ಚುವರಿ ಕೊಠಡಿಗಳನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ಜಿ.ಬಿ.ಬಳಗಾರ, ಟಿ.ಆರ್.ಕಾಗಲ, ನಂದೆವ್ವ ಮಾಳಗಿ, ಎಇಇ ಅನಿಲಕುಮಾರ ಶಿಂಗೆ, ಕೆ.ಪಿ.ನಾಗಾಭರಣ ಇತರರು ಇದ್ದರು. 
ಜಿಲ್ಲೆ

ಸರ್ಕಾರಿ ಸೌಲಭ್ಯ ಸದುಪಯೋಗವಾಗಲಿ

ಶಂಕರ ಗೆಜ್ಜಿ

ಗೋಕಾಕ: ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನ ಕಟ್ಟಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ ಹೇಳಿದರು. ತಾಲೂಕಿನ ಖನಗಾಂವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2021-22ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ 13 ಹೆಚ್ಚುವರಿ ಶಾಲಾ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಸರ್ಕಾರದ ಸೌಲಭ್ಯ ಸದುಪಯೋಗವಾಗಬೇಕು ಎಂದರು. ಶಾಸಕ ರಮೇಶ ಜಾರಕಿಹೊಳಿ ಹೆಚ್ಚುವರಿ ಕೊಠಡಿ ಲೋಕಾರ್ಪಣೆಗೊಳಿಸಿದರು.

ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ, ಶಾಸಕರ ಪಿಎ ಭೀಮಗೌಡ ಪೊಲೀಸಗೌಡರ, ಗ್ರಾಪಂ ಅಧ್ಯಕ್ಷೆ ನಂದೆವ್ವ ಮಾಳಗಿ, ಎಇಇ ಅನಿಲಕುಮಾರ ಶಿಂಗೆ, ಕೆ.ಪಿ.ನಾಗಾಭರಣ, ರಾಜು ಉಜ್ಜಿನಕೊಪ್ಪ, ಅಶೋಕ ರುದ್ರಾಪೂರ, ಬಿ.ಬಿ.ದಾಸನವರ, ಪುಂಡಲೀಕ ವಣ್ಣೂರ, ನಿಂಗಪ್ಪ ವಣ್ಣಿಗೇರಿ, ನಿಂಗಪ್ಪ ಬುಳ್ಳಿ, ರಾಮಣ್ಣ ಪೂಜೇರಿ, ಮಂಜುನಾಥ ಚಿಚ್ಚಿ, ಸಿದ್ದನಗೌಡ ಪಾಟೀಲ, ಮಲ್ಲಪ್ಪ ಪಾಟೀಲ, ಚಂದ್ರಪ್ಪ ಗಸ್ತಿ, ಲಿಂಗನಗೌಡ ಪಾಟೀಲ, ಜಿಲ್ಲಾ ಯೋಜನಾಧಿಕಾರಿ ಹಿರೇಮಠ, ಶಂಕರ ನಾಯ್ಕ ಇದ್ದರು.