ರಾಮದುರ್ಗ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಎಸ್.ಎಂ. ಜಂಬೂನವರ, ಆರ್.ಸಿ ಹಲ್ಯಾಳ, ಆರ್.ಜಿ ಅಮಟೂರ, ಆರ್.ಮಂಜುಳಾ, ವೈಶಾಲಿ ಕುಲಕರ್ಣಿ,ಶಂಕರ ಕಂಬಾರ, ಮುಕ್ತಾ ಜಂಬಾಳೆ ಇತರರಿದ್ದರು. 
ಜಿಲ್ಲೆ

ಸರ್ಕಾರದ ಸೌಲಭ್ಯ ಪಡೆಯಲಿ

ರಾಘವೇಂದ್ರಗೌಡ ಭೀ ಪಾಟೀಲ್

ರಾಮದುರ್ಗ: ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಶಿಶು ಅಭಿವೃದ್ಧಿ ಇಲಾಖೆಯಿಂದ ಮಾಹಿತಿ ಪಡೆದು ಸಾರ್ವಜನಿಕರು ಯೋಜನೆಗಳ ಸದ್ಬಳಕೆ ಮಾಡಿಕೊಂಡರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಎಂ. ಜಂಬೂನವರ ಹೇಳಿದರು.

ಪಟ್ಟಣದ ಗಡದಕೇರಿ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಸೇರಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆ ಮತ್ತು ಮಕ್ಕಳಿಗೆ ಅನ್ಯಾಯವಾದರೆ ಸರ್ಕಾರದ ನೇತತ್ವದಲ್ಲಿಯೇ ನ್ಯಾಯ ಕೊಡಿಸುವ ವ್ಯವಸ್ಥೆಯಿದೆ. ಮಹಿಳೆಯರು ಕಾನೂನುಗಳ ಜ್ಞಾನ ಪಡೆದುಕೊಳ್ಳಬೇಕು. ಜತೆಗೆ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದರು.
ವಕೀಲರ ಸಂಘದ ತಾಲೂಕಾಧ್ಯಕ್ಷ ಆರ್.ಸಿ ಹಲ್ಯಾಳ ಮಾತನಾಡಿ, ಅಂಗನವಾಡಿಗಳ ಮುಖಾಂತರ ಮಹಿಳೆಯರು, ಗರ್ಭಿಣಿಯರು, ಮಕ್ಕಳ ಆರೋಗ್ಯ ಕಾಪಾಡಲು ಪೌಷ್ಟಿಕಾಂಶಭರಿತ ಆಹಾರ ಪೂರೈಕೆ, ಅರಿವು ಕಾರ್ಯಕ್ರಮ, ವೈದ್ಯಕೀಯ ಯೋಜನೆಗಳ ಸೌಲಭ್ಯ ಸದುಪಯೋಗವಾಗಬೇಕು ಎಂದರು.

ಶಿಶು ಅಭಿವದ್ಧಿ ಯೋಜನಾಧಿಕಾರಿ ಶಂಕರ ಕಂಬಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲೆ ಆರ್.ಜಿ ಅಮಟೂರ ಉಪನ್ಯಾಸ ನೀಡಿದರು. 6 ತಿಂಗಳು ಪೂರೈಸಿದ ಮಕ್ಕಳಿಗೆ ಅನ್ನಪ್ರಾಶನ, ಗರ್ಭಿಣಿಯರಿಗೆ ಸೀಮಂತ, ಮಕ್ಕಳ ಹುಟ್ಟುಹಬ್ಬ, ವಿವಿಧ ರೀತಿಯ ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮ ಜರುಗಿದವು. ಸಹಾಯಕ ಶಿಶು ಅಭಿವದ್ಧಿ ಯೋಜನಾಧಿಕಾರಿ ಆರ್.ಮಂಜುಳಾ, ಹಿರಿಯ ಮೇಲ್ವಿಚಾರಕಿಯರಾದ ವೈಶಾಲಿ ಕುಲಕರ್ಣಿ, ಮುಕ್ತಾ ಜಂಬಾಳೆ, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ, ಬಾಣಂತಿಯರು ಇತರರಿದ್ದರು.