ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು ಜಿಲ್ಲಾ ಸಂಘದ ಶಿಕ್ಷಕರ ಕ್ಷೇತ್ರದ ನಿರ್ದೇಶಕರಾಗಿ ಮಾಲೇಗೌಡ, ಸುರೇಶ್ ಮಾಲಂಗಿ, ರಘು, ಮಂಜುನಾಥ್ ಹಾಗೂ ಮಹದೇವ ಆಯ್ಕೆಗೊಂಡಿದ್ದಾರೆ.
ನಗರದ ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜರುಗಿದ ಜಿಲ್ಲಾ ಸಂಘದ 2024-29ನೇ ಸಾಲಿನ ಶಿಕ್ಷಕರ ಕ್ಷೇತ್ರದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬೆಂಬಲಿತ ಅಭ್ಯರ್ಥಿಗಳಾದ ಮಾಲೇಗೌಡ 771 ಮತ, ಸುರೇಶ್ ಮಾಲಂಗಿ 674 ಮತ, ರಘು 537 ಮತ, ಮಂಜುನಾಥ್ 475 ಮತ ಹಾಗೂ ಮಹದೇವ 441 ಮತ ಪಡೆದು ಜಯ ಸಾಧಿಸಿದರು.
5 ನಿರ್ದೇಶಕರ ಸ್ಥಾನಕ್ಕೆ ಒಟ್ಟು 20 ಜನ ಸ್ಪರ್ಧಿಸಿದ್ದರು. 1,375 ಮತದಾರರು ಮತ ಚಲಾಯಿಸಿದರು.