ಜಿಲ್ಲೆ

ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಕ್ರೀಡಾ ಮನೋಭಾವದಿಂದ ಕ್ರೀಡೆ ಯಲ್ಲಿ ಪಾಲ್ಗೋಳ್ಳಿ ; ಸಚಿವ ಡಾ. ಶರಣಪ್ರಕಾಶ ಪಾಟೀಲ

ಕಲಬುರಗಿ: ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಕ್ರೀಡಾಮನೋಭಾವ ಕ್ರೀಡೆಯಲ್ಲಿ. ಪಾಲ್ಗೋಳ್ಳಲು ರಾಜ್ಯದ ವೈದ್ಯಕೀಯ ಶಿಕ್ಷಣ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ.ನೀಡಿದರು

ರವಿವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕರ್ನಾಟಕ ರಾಜ್ಯ ನೌಕರ ಸಂಘ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ೨೦೨೪-೨೫ನೇ ಸಾಲಿನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರು, ಜಿಲ್ಲಾಮಟ್ಟದ ಕ್ರೀಡಾಕೂಡ ಹಾಗೂ ಸಾಂಸ್ಕೃತಿಕ ಸ್ಪರ್ಧೇಗಳು ರವಿವಾರ ಮತ್ತು ಸೋಮವಾರ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಕ್ರೀಡಾಕೂಟಕ್ಕೆ ಬಲೂನು ಹಾರಿಬಿಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಗೆಲುವಿಗೆ ಹೀಗದೆ ಸೋಲಿಗೆ ಕುಗ್ಗದೆ ತಾವೆಲ್ಲರೂ ಹಿತ ಪ್ರಜ್ಞೆರಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದರು.

ಕ್ರೀಡೆಯನ್ನು ಆಯೋಜಿಸಿದ ಎಲ್ಲ ನೌಕರರು ಹಾಗೂ ಕ್ರೀಡೆಯಲ್ಲಿ ಭಾಗವಹಿಸಿದ್ದ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ, ಬಿಸಿಲಿನ ತಾಪಮಾನ ೪೨ ಡಿಗ್ರಿ ಇದ್ದರೂ ಕೂಡ ತಾವೆಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿದ್ಧೀರಿ ನಿಮ್ಮ ಉತ್ಸಾಹಕ್ಕೆ ಅಭಿನಂದನೆ ಎಂದರು

ನಾನು ಕೆಲವು ವರ್ಷಗಳಿಂದ ಬ್ಯಾಡಮಿಂಟನ್ ಆಡುತ್ತಿದ್ದೆ ಈಗ ನನ್ನ ವಯಸ್ಸು ೪೨ ಮತ್ತು ೪೩ ವರ್ಷದಿಂದ ಟೆನ್ನಿಸ್ ಆಟವಾಡುತ್ತಿದ್ದೇನೆ ಇದೀಗ ಆಟವಾಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೇನೆ ಎಂದರು.

ಈಗಾಗಲೇ ಸಚಿವರು ಹೇಳಿದ ಹಾಗೆ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾಮನೋಭಾವ ಬೆಳಸಿಕೊಳ್ಳಬೇಕು. ಮಕ್ಕಳಿಗೂ ಕ್ರೀಡೆಯಲ್ಲಿ ಪಾಲ್ಗೋಳ್ಳಲು ಪ್ರೋತ್ಸಾಹಿಸಬೇಕು ಕ್ರೀಡೆಯಿಂದ ದೇಹಕ್ಕೆ ನೆಮ್ಮದಿ ಶಾಂತಿ ದೊರೆಯುತ್ತದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಕಳೆದ ಎರಡು ದಿನ ಬಿಸಿಲು ಬಹಳ ಇತ್ತು ನಿನ್ನೆ ಸ್ವಲ್ಪ ಮಳೆ ಬಂದಿರವುದರಿಂದ ಸ್ವಲ್ಪ ತಂಪಾಗಿದೆ ಆದರೂ ನಮ್ಮ ಸ್ವಸ್ಥ ಮತ್ತು ನಮ್ಮ ಆರೋಗ್ಯದ ಕಡೆ ಗಮನ ಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಎರಡು ದಿವಸಗಳು ಕ್ರೀಡೆಯನ್ನು ಖುಷಿಯಿಂದ ಮಕ್ಕಳೊಂದಿಗೆ ಆಚರಣೆ ಮಾಡೋಣ ಜೊತೆಗೆ ಸಮಯ ವ್ಯರ್ಥಮಾಡದೇ ತಮ್ಮ ದಿನ ನಿತ್ಯದ ಯೋಗ, ವ್ಯಾಯಮ ಮಾಡಬೇಕು ಎಂದರು.

ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯದಿಂದ ರಾಷ್ಟಮಟಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಬೇಕು ಎಂದರು.

ನಮ್ಮಲ್ಲಿ ಈಗಾಗಲೇ ಕ್ರಿಕೇಟ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ರಾಷ್ಟ್ರಮಟ್ಟಕ್ಕೂ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ ಹೆಮ್ಮಯ ವಿಷಯ ಎಂದರು.

ಇತ್ತೀಚಿನ ದಿನಗಳಲ್ಲಿ ನಾವು ತಿನ್ನುವಂತಹ ಆಹಾರದಲ್ಲಿ ವಿಟಮಿನ್ ಮತ್ತು ಮಿನರಲ್ ಸರಿಯಾಗಿ ಇರುವುದಿಲ್ಲ. ನಮಗೆ ೪೫ ವರ್ಷ ಆದ ನಂತರ ಅನೇಕ ರೋಗಗಳ ಸಮಸ್ಯೆಗಳನ್ನು ಕಾಡುತ್ತವೆ ನಾವು ನಮ್ಮ ಮಕ್ಕಳಿಗೆ ನೋಡಿಕೊಳ್ಳುವುದು ಕಷ್ಟವಾಗುತ್ತದೆ ಆದುದರಿಂದ ನಾವು ದಿನಲೂ ಯೋಗ, ವ್ಯಾಯಮ, ಮಾಡಿದರೆ ನಮ್ಮ ಆರೋಗ್ಯ ಸದೃಢ ಆಗುತ್ತದೆ ಎಂದರು.

ರಾಜ್ಯ ಸರ್ಕಾರ ನೌಕರರ ಗೌರವ ಅಧ್ಯಕ್ಷ ಎಲ್. ಸುರೇಶ ಶರ್ಮಾ ಮಾತನಾಡಿ, ವಿವಿಧ ತಾಲೂಕುಗಳಿಂದ ಸ್ಪರ್ಧೇಗಳಲ್ಲಿ ಭಾಗವಹಿಸಿ ಸೋಲು ಗೆಲುವು ಮುಖ್ಯ ಇಲ್ಲ ಕ್ರೀಡೆಯಲ್ಲಿ ಭಾಗವಹಿಸಿದ್ದರೆ ನಾವು ಮಾನಸಿಕವಾಗಿ ಸದೃಢರಾಗಬಹುದು ಎಂದರು.

ಇದೇ ಸಂದರ್ಭದಲ್ಲಿ ಗುಂಡು ಎಸೆತದಲ್ಲಿ ಸಚಿವರು,ಜಿಲ್ಲಾಧಿಕಾರಿಗಳು ಶಾಸಕರು ಭಾಗವಹಿಸಿ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕ್ರೀಡಾಪಟುಳು ರನ್ನಿಂಗ್, ರೀಲೆ, ಲಾಂಗಜಂಪ್, ಹೈ ಜಂಪ್, ಶಾರ್ಟ್ ಪುಟ್ ಡಿಸ್ಕಸ್,ಜವಲಿನ್ ಇತರೆ ಆಟಗಳಲ್ಲಿ ಭಾಗವಹಿಸಿದ್ದರು.

ಸುರೇಶ ವಗ್ಗೆ, ರಾಕೇಶ ಚವ್ಹಾಣ ಅರುಣ ನಾಗರಾಜ, ಭೀಮರೆಡ್ಡಿ ಬಾಲನಗೌಡ, ಮಹ್ಮದ್‌ಪಾಷ ಅವರಿಂದ ಸಚಿವರು ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಕಾಮಂತ ಏರಿ ಸ್ವಾಗತಿಸಿದರು. ಖಜಾಂಚಿ ಶ್ರೀಮಂತ ಪಟ್ಟೇದಾರ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಜ್ ಜವಳಿ ವಂದಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗರ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಸುರೇಶ ವಗ್ಗೆ, ಶರಣುಕುಮಾರ ಟೆಂಗಳಿ, ಅಬ್ದುಲ್ ಖಯೂಮ್, ಅನಿಲ್ ಬಿ.ಜಿ. ಗಿರೀಶ ಜಮಖಂಡಿ ಸೇರಿದಂತೆ ರಾಷ್ಟಮಟ್ಟ ಪಡೆದವರಿಗೆ ಸನ್ಮಾನ ಮಾಡಿದರು.

ವೇದಿಕೆ ಮೇಲೆ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಬಳೂಂಡಗಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಎಸ್. ಅಷ್ಟಗಿ, ಎಲ್ಲ ತಾಲೂಕು ಅಧ್ಯಕ್ಷರುಗಳಾದ ಅರವಿಂದ ಪಸಾರ , ದಾನಪ್ಪಗೌಡ ಹಳಿಮನಿ,ಮಿಟ್ಟೆಸಾಬ ಮುಲ್ಲಾ, ಸಂಜೀವ ಬಗಲಿ, ಅನೀಲ ಕುಮಾರ ಗುತ್ತೇದಾರ , ಶಿವಕುಮಾರ ಡಂಬಳ, ದೇವಿಂದಪ್ಪ ಹೋಳ್ಕರ್, ಸೇರಿದಂತೆ ಕ್ರೀಡಾ ಕಾರ್ಯದರ್ಶಿ ರಾಕೇಶ ಚವ್ಹಾಣ, ಜಿಲ್ಲೆಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.