ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿಕೆ | ಸಿಎಂ ಡಿಸಿಎಂ ಭರವಸೆ |ನಾನು ಸದಾ ಹೋರಾಟಗಾರರ ಜತೆಗಿರುವೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ಅಡಿ ಜೇವರ್ಗಿ ತಾಲೂಕಿನ ಮಲ್ಲಾಬಾದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಕಾರ್ಯಗತಗೊಳಿಸುವ ಭರವಸೆ ನೀಡಿದ್ದಾರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾಗಿರುವ ಶಾಸಕ ಡಾ.ಅಜಯ ಧರ್ಮಸಿಂಗ್ ತಿಳಿಸಿದ್ದಾರೆ. ಯೋಜನೆ ಅನುಷ್ಠಾನದ ವಿಷಯದಲ್ಲಿ ಶಂಕೆ ಬೇಡ, ಅಂತಹ ಸಂದರ್ಭ ಎದುರಾದರೇ ನಾನೇ ಹೋರಾಟಗಾರರ ಜತೆಗಿರುವೆ ಎಂದು ತಿಳಿಸಿದ್ದಾರೆ. ಆಡಳಿತಾತ್ಮಕ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿದೆ. ಈ ನೀರಾವರಿ ಕಾಮಗಾರಿ ತ್ವರಿತವಾಗಿ ಆರಂಭಿಸುವ ಕುರಿತಂತೆ ಸಿಎಂ ಹಾಗೂ ಡಿಸಿಎಂ ಆಸಕ್ತಿ ಹೊಂದಿದ್ದಾರೆ. ಕಾರಣಾಂತರದಿAದ ಕೆಬಿಜೆಎನ್‌ಎಲ್ ಬೋರ್ಡ್ ಸಭೆ ಮುಂದೂಡಿದ್ದರಿAದ ಮಹತ್ವದ ನಿರ್ಣಯ ಕೈಗೊಳ್ಳಲು ಆಗಿಲ್ಲ. ಯೋಜನೆ ಆಗುವುದು ಪಕ್ಕಾ ಎಂದಿದ್ದಾರೆ. ಈಗಾಗಲೇ ಕೃಷ್ಣಾ ಭಾಗ್ಯ ಜಲ ನಿಗಮದ ೧೪೦ನೇ ಆಡಳಿತ ಮಂಡಳಿ ಸಭೆಯಲ್ಲಿ ಅಂಗೀಕಾರವಾಗಿದೆ. ಯೋಜನೆಯ ಹಂತ ೧, ೨ ಮತ್ತು ೩ರ ಬಾಕಿ ಉಳಿದಿರುವ ವಿತರಣಾ ಕಾಮಗಾರಿಹರ ಅನುದಾನವನ್ನು ನಿಗದಿಪಡಿಸಲು ಸಚಿವರು ಸೂಚಿಸಿz್ದÁರೆ.ಕಳೆದ ನ.೨೭ ರಂದು ನಿಗದಿಯಾಗಿದ್ದ ನಿಗಮದ ಸಭೆ ಜಾರ್ಖಂಡ ಚುನಾವಣೆ ಹಾಗೂ ಸಿಎಂ ಪ್ರಮಾಣವಚನ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಾಗಿ ನೀರಾವರಿ ಖಾತೆ ನೋಡಿಕೊಳ್ಳುತ್ತಿರುವ ಡಿಸಿಎಂ ಹೇಳಿದ್ದಾರೆ ಎಂದು ಡಾ.ಅಜಯಸಿಂಗ್ ತಿಳಿಸಿದ್ದಾರೆ. ಮ¯್ಲÁಬಾದ್ ಏತ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಜೇವರ್ಗಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ವಾಗ್ದಾನ ನೀಡಿದಂತೆ ತ್ವರಿತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೂಡಾ ನೀಡಿದ್ದಾರೆ. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿಯೂ ಮ¯್ಲÁಬಾದ ಏತ ನೀರಾವರಿ ಯೋಜನೆ ಬಗ್ಗೆ ನಾನು ಕೊಟ್ಟಿದ್ದ ಪ್ರಶ್ನೆಗಳು ಚುಕ್ಕೆ ಗುರುತಾಗಿ ಸದನದಲ್ಲಿ ವಿಷಯ ಪ್ರಸ್ತಾಪಿಸುವ ಅವಕಾಶ ಸಿಕ್ಕಿತ್ತು. ಡಿ.೧೦ ಕಲಾಪದಲ್ಲಿ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರಾಗಿರುವ ಡಿಕೆಶಿ ಅವರು ಉತ್ತರ ನೀಡಬೇಕಿತ್ತು. ಆದರೆ,ಮಾಜಿ ಸಿಎಂ ಕೃಷ್ಣ ಅವರ ನಿಧನದಿಂದಾಗಿ ಸದನ ಮುಂದೂಡಲ್ಪಟ್ಟಿದ್ದರಿAದ ಪ್ರಸ್ತಾಪವಾಗಿಲ್ಲ. ಈ ಯೋಜನೆ ಬಗ್ಗೆ ತಾವು ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಇz್ದÉÃನೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಅಲಕ್ಷತನ ಮಾಡಲ್ಲ ಎಂದು ತಿಳಿಸಿದ್ದಾರೆ. ಈ ಯೋಜನೆ ಪೂರ್ಣಗೊಳಿಸಿ ೩೩, ೮೬೦ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ನಾನೂ ಸಹ ಅಷ್ಟೇ ಗಂಭೀರವಾಗಿ ಈ ಬಗ್ಗೆ ಕೆಲಸ ಮಾಡುತ್ತಿರುವೆ ಎಂದು ಡಾ.ಅಜಯಸಿಂಗ್ ತಿಳಿಸಿದ್ದಾರೆ.
ಕೋಟ್
ಈಗಾಗಲೇ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಕಾಲಮಿತಿಯೊಳಗೆ ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ಮನವರಿಕೆ ಮಾಡಿಕೊಟ್ಟಿರುವೆ.ಅವರು ಜಲಸಂಪನ್ಮೂಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
. ಈ ಯೋಜನೆ ಮೂಲಕ ಯಡ್ರಾಮಿ ತಾಲೂಕಿನ ೩೮ ಹಳ್ಳಿಗಳು ಮತ್ತು ಜೇವರ್ಗಿ ತಾಲೂಕಿನ ೨೦ ಹಳ್ಳಿಗಳ ರೈತರ ಜಮೀನುಗಳಿಗೆ ನೀರು ಒದಗಿಸಲು ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ.
| ಡಾ.ಅಜಯ ಧರ್ಮಸಿಂಗ್ ಜೇವರ್ಗಿ ಶಾಸಕ