ಜಿಲ್ಲೆ

ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಸಹಕಾರಿ - ಬೆಟ್ಟಂಪಾಡಿ ಕಾಲೇಜಿನಲ್ಲಿ ನಂದಕಿಶೋರ್ ಅಭಿಮತ

Mangaluru - Nishantha Narayana

ಪುತ್ತೂರು: ಎನ್ನೆಸ್ಸೆಸ್‌ನಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುವುದಲ್ಲದೆ ಉತ್ತಮ ನಾಯಕತ್ವ ಗುಣ ಹಾಗೂ ಜೀವನದಲ್ಲಿ ಯಶಸ್ಸನ್ನು ಸಾಽಸಲು ಸಹಾಯಕಾರಿಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಆಂಗ್ಲ ಭಾಷೆ ಪ್ರಾಧ್ಯಾಪಕ ನಂದಕಿಶೋರ್ ಹೇಳಿದರು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ಎನ್ನೆಸ್ಸೆಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.


ಗ್ರಂಥಾಪಾಲಕ ಶ್ರೀರಾಮ ಕೆ., ಆಂತರಿಕ ಗುಣಮಟ್ಟ ಭರವಸ ಕೋಶ ಸಂಚಾಲಕ ಡಾ.ಕಾಂತೇಶ್ ಎಸ್.ಮಾತನಾಡಿದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಪೊಡಿಯ ಅಧ್ಯಕ್ಷತೆ ವಹಿಸಿದ್ದರು.


ನಿಕಟಪೂರ್ವ ನಾಯಕರು ತಮ್ಮ ಜವಾಬ್ದಾರಿ ನೂತನ ನಾಯಕರುಗಳಿಗೆ ಹಸ್ತಾಂತರಿಸಿದರು. ಬಳಿಕ ನಿಕಟಪೂರ್ವ ಸ್ವಯಂಸೇವಕರು ತಮ್ಮ ಎನ್ನೆಸ್ಸೆಸ್ ಜೀವನದ ಅನುಭವ ಹಂಚಿಕೊಂಡರು. ಎನ್ನೆಸ್ಸೆಸ್ ಘಟಕ ಯೋಜನಾಽಕಾರಿ ಡಾ.ಲಾಯ್ಡ್ ವಿಕ್ಕಿ ಡಿಸೋಜ, ಉಪನ್ಯಾಸಕ ವೃಂದ, ಘಟಕ ನಾಯಕರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ವಿವಿಧ ಸ್ಪರ್ಧೆ ಎನ್ನೆಸ್ಸೆಸ್‌ನ ವತಿಯಿಂದ ನಡೆಸಲಾಯಿತು.


ಘಟಕ ನಾಯಕರಾದ ಮನೀಷ್ ಸ್ವಾಗತಿಸಿ. ರಂಜಿತ್ ಪಿ.ವಂದಿಸಿದರು. ಸುಚಿತಾ ಅತಿಥಿಗಳ ಪರಿಚಯ ನಡೆಸಿದರು. ಘಟಕ ನಾಯಕಿಯಾದ ಮಮತಾ ಕೆ.ನಿರೂಪಿಸಿದರು.


ನಮ್ಮ ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ವತಿಯಿಂದ ನಡೆಯುವ ವಿವಿಧ ಚಟುವಟಿಕೆಗಳ ಕುರಿತು ಹೊಸದಾಗಿ ಸೇರಿದಂಥ ಸ್ವಯಂಸೇವಕರುಗಳಿಗೆ ಅರಿವನ್ನು ನೀಡಿದ್ದು, ಮಾತ್ರವಲ್ಲದೆ ನಮ್ಮ ಕಾಲೇಜಿನ ಎನ್ನೆಸ್ಸೆಸ್ ಘಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಹೆಸರನ್ನು ಹೊಂದಿದೆ.
| ಡಾ.ಯೋಗೀಶ್ ಎಲ್.ಎನ್.
ಎನ್ನೆಸ್ಸೆಸ್ ಯೋಜನಾಽಕಾರಿ