ಜಿಲ್ಲೆ

ಸರ್ಕಾರಿ ನೌಕರರ ಸಂಘದ ಎಲೆಕ್ಷನ್ ಸುಸೂತ್ರ ; ಜಿಲ್ಲಾ ಶಾಖೆಯ 24 ಸ್ಥಾನಗಳಿಗೆ ಚುನಾವಣೆ : ಕೆ. ಸತೀಶ್ ತಂಡದ ಹೆಚ್ಚಿನ ಅಭ್ಯರ್ಥಿಗಳ ಗೆಲುವು

ರೇಷ್ಮೆ ನಗರ ಡೆಸ್ಕ್

ರಾಮನಗರ : ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ 24 ಸ್ಥಾನಗಳಿಗೆ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದ ಜಿಕೆಎಂಪಿಬಿಎಸ್ ಶಾಲಾ ಆವರಣದಲ್ಲಿ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್ ತಂಡದ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಸಂಧರ್ಭದಲ್ಲಿ ಆಯಾ ಇಲಾಖೆಗಳ ಅಭ್ಯರ್ಥಿಗಳು ಜಯಗಳಿಸಿದ ಪರಿಣಾಮ ಶಾಲಾ ಆವರಣದಲ್ಲಿ ಸತೀಶ್ ನೇತೃತ್ವದಲ್ಲಿ ಗೆದ್ದವರಿಗೆ ಸಹಿಹಂಚಿ ಸಂಭ್ರಮಿಸಿದರು.

ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ. ಸತೀಶ್, ಸತತವಾಗಿ ಆಯಾಯ ಇಲಾಖೆಯ ನೌಕರರು ಸಹಕಾರ ಸಮನ್ವಯ ಸಾಧಿಸಿ ವಿಜಯ ಸಾದಿದ್ದಾರೆ. ಇದು ಒಗ್ಗಟ್ಟಿನ ಗೆಲುವು. ಎಲ್ಲ ಇಲಾಖಾ ಮುಖ್ಯಸ್ಥರು ಮಾರ್ಗದರ್ಶನದಲ್ಲಿ ಹೆಚ್ಚಿನ ರೀತಿಯಲ್ಲಿ ಜಯ ಸಿಕ್ಕಿದೆ ಎಂದರು.

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸಿ. ವಿಜಯ್‌ಕುಮಾರ್ ಮಾತನಾಡಿ, ನಮ್ಮ ಸಂಘಟನೆಯ ಒಮ್ಮತದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಶಿವಸ್ವಾಮಿ ಮತ್ತು ಸತೀಶ್ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಇದು ಸಂಘಟನೆಗೆ ಸಿಕ್ಕ ಗೆಲುವಾಗಿದೆ ಎಂದರು.

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾಯದರ್ಶಿ ಎಲ್.ಸಿ. ಮಹದೇವಯ್ಯ, ಶಿಕ್ಷಕರಾದ ಎಂ.ಎನ್. ದೇವರಾಜು, ಪ್ರಸನ್ನ, ರಾಮಲಿಂಗಯ್ಯ, ರೂಪೇಶ್, ಕೆ.ಎಸ್.ಗೋಪಾಲ್, ಜಿನ್ಹಾ, ಹರೀಶ್, ರವಿಕಮಾರ್, ಚಿಕ್ಕವೀರಯ್ಯ, ಅಬೂಬ್‌ಕರ್, ರಮೇಶ್, ಶಿವರಾಜು, ಸುಚಿತ್ರಾಕುಂಭಾರ್, ಜಗದೀಶ್, ರಂಗಸ್ವಾಮಿ, ಶಿವರಾಮಯ್ಯ, ರಾಜಶೇಖರ್, ವೆಂಕಟೇಶಯ್ಯ, ಮರಿಸ್ವಾಮಿ, ರವೀಂದ್ರ ಇದ್ದರು.

ಆಯ್ಕೆಯಾದ ನಿರ್ದೇಶಕರು : 2024-2029ನೇ ಅವಧಿಯ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪಂಚಾಯತ್ ರಾಜ್ ಇಲಾಖೆ ಮತ್ತು ಸಿಬ್ಬಂದಿಯಿಂದ ಎಂ. ರಾಜೇಗೌಡ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಡಾ. ಎ.ಎಂ. ನಾಗೇಶ್, ಸರ್ಕಾರಿ ಪ್ರೌಢಶಾಲೆಗಳ 2 ಸ್ಥಾನದಿಂದ ಶಿವಸ್ವಾಮಿ ಮತ್ತು ಸತೀಶ್, ಶಾಲಾ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಸಿದ್ದಲಿಂಗಸ್ವಾಮಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸಿ. ಬೈರಪ್ಪ, ಜಲಸಂಪನ್ಮೂಲ ಇಲಾಖೆಯಿಂದ ಎಸ್.ಎಂ. ಶಿವಕುಮಾರ್, ಅರಣ್ಯ ಇಲಾಖೆಯಿಂದ ಕೆ.ಬೈರವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಳಿತ ಕಚೇರಿಯಿಂದ ಎನ್.ಬಿ.ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಸ್ಪತ್ರೆ, ಸಿಬ್ಬಂದಿ ಇಲಾಖೆಯ 3 ಸ್ಥಾನಗಳಿಂದ ಬಿ. ಶಿವಕುಮಾರ್, ಸಿ. ಲಿಂಗರಾಜು, ಕೆ. ರಾಮಸ್ವಾಮಿ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಸ್ಪತ್ರೆ 2 ಸ್ಥಾನಗಳಿಂದ ಸಿ.ಗಣೇಶ್ ಮತ್ತು ಸಿ.ಕೆ. ರವಿ, ತೋಟಗಾರಿಕೆ ಇಲಾಖೆಯಿಂದ ಸಿದ್ದರಾಜು, ಗ್ರಂಥಾಲಯ ಇಲಾಖೆಯಿಂದ ಎಂ. ಅನಿತಾ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಕೆ. ಉಮೇಶ್, ಭೂ ಮಾಪನ ಕಂದಾಯ ವ್ಯವಸ್ಥೆ ಇಲಾಖೆಯಿಂದ ಎಸ್. ಸುನಿಲ್‌ಕುಮಾರ್, ನ್ಯಾಯಾಂಗ ಇಲಾಖೆ 2 ಸ್ಥಾನಗಳಿಂದ ಎಸ್.ಆರ್. ಚಂದ್ರಶೇಖರ್ ಮತ್ತು ಕೆ.ಆರ್. ಮೋಹನ್, ಪ್ರಾಥಮಿಕ ಶಾಲೆಯಿಂದ ಶಂಕರಾನಂದ, ಶಿವರುದ್ರಯ್ಯ, ಕಾಂತರಾಜು ಎಂ, ಪ್ರಭು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸೋಮಲಿಂಗಯ್ಯ ತಿಳಿಸಿದರು.