ಜಿಲ್ಲೆ

ಒಳ ಮೀಸಲು ಹಂಚಿಕೆ ಸರಿಯಾಗಿಲ್ಲ, ಸಂಸದ ಕಾರಜೋಳ ಆರೋಪ

Kopala - Raveendra V K

ಕೊಪ್ಪಳ: ಪರಿಶಿಷ್ಟ ಜಾತಿಗಳಿಗೆ ಹಂಚಿಕೆ ಮಾಡಿರುವ ಒಳ ಮೀಸಲು ಯಾವ ಮಾನದಂಡದಲ್ಲಿ ಮಾಡಿದ್ದಾರೆಂದು ಗೊತ್ತಿಲ್ಲ. ಕೇವಲ ಸಂಪುಟ ಸಚಿವರನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಸಲರಾಗಿದ್ದಾರೆ. ಇದರಿಂದ ಪಜಾ ಸಮುದಾಯಗಳಿಗೆ ಖುಷಿಯಾಗಿಲ್ಲವೆಂದು ಸಂಸದ ಗೋವಿಂದ ಕಾರಜೊಳ ಆರೋಪಿಸಿದರು.

ತಾಲೂಕಿನ ಮುನಿರಾಬಾದ್​ನಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಸುಪ್ರೀಂ ಕೋರ್ಟ್​, ಮಾಧುಸ್ವಾಮಿ ವರದಿಯಂತೆಯೂ ಮಾಡಿಲ್ಲ. ತಾವೇ ರಚಿಸಿದ ನ್ಯಾ.ನಾಗಮೋಹನದಾಸ್​ ವರದಿ ಆಧರಿಸಿ ಮೀಸಲು ಹಂಚಿಕೆಯಾಗಿಲ್ಲ. ದಲಿತ ಕಲ್ಯಾಣದ ಹೆಸರಿನಲ್ಲಿ ಅನ್ಯಾಯ ಮಾಡಿದ್ದಾರೆ. ಇದನ್ನು ನಮ್ಮ ಸಮುದಾಯದವರು ಒಪು$್ಪವುದಿಲ್ಲವೆಂದು ಟೀಕಿಸಿದರು.

ಮದ್ದೂರು ಗಲಾಟೆ ಸರ್ಕಾರದ ಪ್ರಾಯೋಜಿತ ನಾಟಕ. ಹಬ್ಬಗಳು ನಮ್ಮ ಸಂಪ್ರದಾಯ. ಸಿದ್ದರಾಮಯ್ಯ ಸೋನಿಯಾಗಾಂಧಿ, ರಾಹುಲ್​ ಗಾಂಧಿ ಅವರನ್ನು ಮೆಚ್ಚಿಸಲು ಇಂಥ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹಿಂದು ಹಬ್ಬ ಬಂದರೆ ಗಲಾಟೆ ಆಗುತ್ತದೆ ಎಂದು ಸರ್ಕಾರವೇ ಗುಲ್ಲು ಮಾಡುತ್ತದೆ. ಪೊಲೀಸರನ್ನು ನಿಯೋಜಿಸಿ ಗಲಾಟೆ ಮಾಡಿಸುತ್ತಾರೆ. ನಮ್ಮ ಯುವಕರು ಝಂಡಾ ಹಿಡಿದರೆ ಪೊಲೀಸರು ಕಸಿಯುತ್ತಾರೆ. ಕೇಸರಿ ಧ್ವಜ ಹಿಡಿಯದಂತೆ ಮೌಖಿಕ ಆದೇಶ ಮಾಡುತ್ತಾರೆ. ಚಾಮುಂಡಿ ಬೆಟ್ಟಕ್ಕೆ ಹೋಗದಂತೆ ತಡೆಯುತ್ತಾರೆ. ಪಾಕಿಸ್ತಾನಪರ ಘೋಷಣೆ ಕೂಗಿದರೂ ಕ್ರಮ ಕೈಗೊಳ್ಳದ ಸರ್ಕಾರಕ್ಕೆ ನಾಚಿಕೆ ಆಗಬೇಕು. ಇದೊಂದು ಅಯೋಗ್ಯ ಸರ್ಕಾರವೆಂದು ಚೇಡಿಸಿದರು.

ಮಾಜಿ ಶಾಸಕ ಬಸವರಾಜ ದಢೇಸೂಗುರೂ, ಹನುಮಂತಪ್ಪ ಬಳ್ಳಾರಿ, ಲಕ್ಷಿ$್ಮನಾರಾಯಣ, ಅನಿಲಕುಮಾರ, ಗಣೇಶ ಹೊರತಟ್ನಾಳ ಇದ್ದರು.