ರಾಷ್ಟ್ರೀಯ ಮೋದಿ ಬ್ರಿಗೇಡ್ ವತಿಯಿಂದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಲಾಯಿತು 
ಜಿಲ್ಲೆ

ಹಾನಿ ಪ್ರದೇಶ ವಿಶೇಷ ಗಮನಕ್ಕೆ ಆಗ್ರಹ: ರಾಷ್ಟ್ರೀಯ ಮೋದಿ ಬ್ರಿಗೇಡ್‌ನಿಂದ ರಾಜ್ಯಪಾಲರ ಭೇಟಿ

ಇಂದಿರಾ ಎನ್ ಕೆ

ಕೊಕ್ಕರ್ಣೆ: ರಾಷ್ಟ್ರೀಯ ಮೋದಿ ಬ್ರಿಗೇಡ್ ವತಿಯಿಂದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ದೆಹಲಿ ಕಚೇರಿಯಲ್ಲಿ ಭೇಟಿಯಾಗಿ ಉಡುಪಿ, ದ.ಕ., ಉತ್ತರ ಕನ್ನಡ ಹಾಗೂ ಕೇರಳದ ವಯನಾಡು ಪ್ರದೇಶಗಳಲ್ಲಿ ಗುಡ್ಡಗಾಡು ಕುಸಿತದಿಂದ ಸಾವಿರಾರು ಕುಟುಂಬ ಜೀವ ಕಳೆದುಕೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಆ ಕುಟುಂಬಗಳಿಗೆ ವಿಶೇಷ ಪರಿಹಾರ ಹಾಗೂ ಪುನಃ ಜೀವನ ನಿರ್ಮಾಣಕ್ಕೆ ವಿಶೇಷ ಗಮನಹರಿಸುವಂತೆ ಪ್ರಧಾನ ಮಂತ್ರಿ ಮೋದಿಯವರಿಗೆ ಒತ್ತಡ ಹಾಕುವಂತೆ ರಾಜ್ಯಪಾಲರನ್ನು ಆಗ್ರಹಿಸಿದರು.

ಸಂಸದರಾದ ಅನಿಲ್ ಫಿರೋಜಿ, ಕೇರಳ ಬಿಜೆಪಿ ಮುಖಂಡ ಪಳನಿಸ್ವಾಮಿ, ರಾಷ್ಟ್ರೀಯ ಮೋದಿ ಬ್ರಿಗೇಡ್ ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ಹಿರಿಯ ಮುಖಂಡರು ಉಪಸ್ಥಿತರಿದ್ದರು.