ಜಿಲ್ಲೆ

ವಿಟಿಯು ಘಟಿಕೋತ್ಸವ ಏ.3ರಂದು

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಏ. 3ರಂದು ಮಧ್ಯಾಹ್ನ 12 ಗಂಟೆಗೆ 20ನೇ ವಾರ್ಷಿಕ ಘಟಿಕೋತ್ಸವ ಜರುಗಲಿದೆ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ಮಾಹಿತಿ ನೀಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸುವರು. ರಕ್ಷಣಾ ಇಲಾಖೆಯ ಮಾಜಿ ವೈಜ್ಞಾನಿಕ ಸಲಹೆಗಾರ ಡಾ. ವಿ.ಕೆ.ಆಸ್ಪತ್ರೆ ಅವರು ಘಟಿಕೋತ್ಸವ ಭಾಷಣ ಮಾಡುವರು. ಕರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ಪ್ರಕಟಿಸಿದ ಮಾರ್ಗಸೂಚಿ ಅನುಸಾರವೇ ಕಾರ್ಯಕ್ರಮ ಆಯೋಜಿಸಿ, 100 ಜನರಿಗಷ್ಟೇ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ವಿದ್ಯಾರ್ಥಿ ಪಾಲಕರಿಗೆ ಕಾರ್ಯಕ್ರಮ ವೀಕ್ಷಿಸಲು ವಿವಿ ಆವರಣದಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗುವುದು. ರಾಜ್ಯಾದ್ಯಂತ ಎಲ್ಲ ಇಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ಆನ್‌ಲೈನ್ ಮೂಲಕ ನೇರಪ್ರಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪದವಿ ಪ್ರದಾನ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮಾ ಅವರಿಗೆ ‘ಡಾಕ್ಟರ್ ಆ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಗುವುದು. 63,160 ಬಿ.ಇ. ವಿದ್ಯಾರ್ಥಿಗಳು, 892 ಬಿ.ಆರ್ಕ್, 4,817 ಎಂಬಿಎ, 1,248 ಎಂಸಿಎ, 1,704 ಎಂ.ಟೆಕ್, 77 ಎಂ.ಆರ್ಕ್ ಹಾಗೂ 278 ಪಿಜಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.

635 ಸಂಶೋಧನಾರ್ಥಿಗಳಿಗೆ ಪಿಎಚ್.ಡಿ., ಐವರಿಗೆ ಎಂ.ಎಸ್ಸಿ. (ಇಂಜಿನಿಯರಿಂಗ್) ಬೈ ರಿಸರ್ಚ್ ಮತ್ತು ಮೂವರಿಗೆ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ನೀಡಲಾಗುವುದು ಎಂದು ತಿಳಿಸಿದರು. ಚಿನ್ನದ ಹುಡುಗಿ ಅಸ್ಮಥ್: ಸಿವಿಲ್ ವಿಭಾಗದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್‌ನ ವಿದ್ಯಾರ್ಥಿನಿ ಟಿ.ಎಸ್. ಅಸ್ಮಥ್ ಶರ್ಮೀನ್ 13 ಚಿನ್ನದ ಪದಕ ಗಳಿಸಿದ್ದಾಳೆ.

ಬೆಂಗಳೂರು ಬಿಎಂಎಸ್ ತಾಂತ್ರಿಕ ಸಂಸ್ಥೆಯ ಮೆಕಾನಿಕಲ್ ವಿಭಾಗದ ಅರುಣ ಡಿ., ಬೆಂಗಳೂರು ಸರ್. ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯ ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಗಗನಾ ರೆಡ್ಡಿ, ಮೈಸೂರು ವಿದ್ಯಾವರ್ಧಕ ಕಾಲೇಜ್‌ನ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಎಚ್.ಆರ್. ಅಪೂರ್ವಾ ತಲಾ 7 ಚಿನ್ನ, ಬೆಂಗಳೂರು ವೇಮನಾ ತಾಂತ್ರಿಕ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಎ.ಸನ್ನಿಧಿ 6 ಚಿನ್ನದ ಪದಕ ಗಳಿಸಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಬಿಎನ್‌ಎಂಐಟಿಯ ಎಂಬಿಎ ವಿಭಾಗದ ಕೆ.ಎಂ. ಭೂಮಿಕಾ, ಬೆಂಗಳೂರು ಬಿಐಟಿಯ ಇಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ವಿಭಾಗದ ಸೀಮಾ ಹೆಗ್ಡೆ, ಬೆಂಗಳೂರು ಆರ್‌ಎನ್‌ಎಸ್‌ಐಟಿ ಯ ಇನ್ಫಾರ್ಮೇಶನ್ ಸೈನ್ಸ್ ವಿಭಾಗದ ಪಿ.ಯುಕ್ತಾ, ಮಂಗಳೂರು ಶ್ರೀನಿವಾಸ ತಾಂತ್ರಿಕ ಸಂಸ್ಥೆಯ ನ್ಯಾನೋ ಟೆಕ್ನಾಲಜಿ ವಿಭಾಗದ ಜುನೇದ್ ಖಾನ್ ತಲಾ 4 ಚಿನ್ನ, ಮಂಗಳೂರು ಸೇಂಟ್ ಜೊಸ್ೆ ಇಂಜಿನಿಯರಿಂಗ್ ಕಾಲೇಜ್‌ನ ಎಂಸಿಎ ವಿಭಾಗದ ಡಿಸಿಲ್ವಾ ಡೇನಿಯಲ್ ಹಾಗೂ ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜ್‌ನ ಎಂ.ಟೆಕ್ ವಿಭಾಗದ ಎಂ.ಬಿ. ಪ್ರಿಯಾ ತಲಾ 3 ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಲಿತಾಂಶ ಸುಧಾರಣೆ: ಬಿ.ಇ/ಬಿ.ಟೆಕ್‌ನಲ್ಲಿ ಶೇ.80.78, ಬಿ.ಆರ್ಕ್‌ನಲ್ಲಿ ಶೇ.93.80, ಎಂ.ಟೆಕ್‌ನಲ್ಲಿ ಶೇ.92.26, ಎಂಬಿಎನಲ್ಲಿ ಶೇ.84.30, ಎಂಸಿಎನಲ್ಲಿ ಶೇ.94.62 ಮತ್ತು ಎಂ.ಆರ್ಕ್‌ನಲ್ಲಿ ಶೇ.100 ಲಿತಾಂಶ ದಾಖಲಾಗಿದೆ. ಕಳೆದ ಬಾರಿ ಎಲ್ಲ ಕೋರ್ಸ್‌ಗಳ ಒಟ್ಟಾರೆ ಲಿತಾಂಶ ಶೇ.78.08 ದಾಖಲಾಗಿತ್ತು. ಈ ಬಾರಿ ಶೇ.81.62ಕ್ಕೆ ಏರಿಕೆಯಾಗಿದೆ. ಕರೊನಾತಂಕ ಮಧ್ಯೆಯೂ ಬೋಧಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಲವಾಗಿ ಲಿತಾಂಶ ಸುಧಾರಣೆಯಾಗಿದೆ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳಿದರು. ಕುಲಸಚಿವ ಪ್ರೊ.ಆನಂದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ ಇದ್ದರು.