ರಾಯಚೂರು ದೇಶವನ್ನು ಆಹಾರ ಮತ್ತು ಕೃಷಿ ಉತ್ಪಾದನೆಯ ಜತೆಗೆ ತಂತ್ರಜ್ಞಾನ, ನಾವೀನ್ಯತೆ ಮತ್ತು ನೈತಿಕತೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವಲ್ಲಿ ಕೃಷಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವದಲ್ಲಿ ಬಳ್ಳಾರಿಯ ಜಿಂದಾಲ್‌ನಿಂದ ವರ್ಚುವಲ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು. ಕೃಷಿ ಆಧಾರಿತ ನವೋದ್ಯಮಗಳು ಭಾರತೀಯ ಆರ್ಥಿಕತೆಯಲ್ಲಿ ಕ್ರಾಂತಿಯನ್ನು ಉಂಟು ಮಾಡುತ್ತಿವೆ. ಇಂದು ಭಾರತದ ಆರ್ಥಿಕತೆಯು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಕೃಷಿ ವಲಯವು ಅದರಲ್ಲಿ ಪ್ರಮುಖ ಕೊಡುಗೆ ಹೊಂದಿದೆ. ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ ದಂತಹ ಯೋಜನೆಗಳಿಗೆ ಸೇರಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಯುವಪೀಳಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಕೃಷಿ ಅಭಿವೃದ್ಧಿಯಲ್ಲಿ ತೋಟಗಾರಿಕೆ ವಲಯವು ವಿಶೇಷ ಸ್ಥಾನ ಹೊಂದಿದೆ. ತೋಟಗಾರಿಕಾ ಬೆಳೆಗಳು ಪ್ರತಿ ಯೂನಿಟ್ ಪ್ರದೇಶಕ್ಕೆ ಹೆಚ್ಚಿನ ಆದಾಯ, ಉದ್ಯೋಗ ಮತ್ತು ಪೋಷಣೆಯನ್ನು ನೀಡುತ್ತಿರುವುದರಿಂದ, ಈ ಬೆಳೆಗಳು ವಾಣಿಜ್ಯ ರೂಪವನ್ನು ಪಡೆದುಕೊಳ್ಳುತ್ತಿವೆ, ಇದರಿಂದಾಗಿ ಈ ಬೆಳೆಗಳ ಉತ್ಪಾದನೆಯತ್ತ ರೈತರ ಒಲವು ಹೆಚ್ಚುತ್ತಿದೆ. ಇಂದು ಔಷಧೀಯ ಮತ್ತು ಸುಗಂಧ ದ್ರವ್ಯಗಳ ಆಧಾರದ ಮೇಲೆ ವ್ಯಾಪಾರವು ಪ್ರಪಂಚದಾದ್ಯಂತ ಬೆಳೆಯುತ್ತಿದೆ. ನಮ್ಮ ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಔಷಧೀಯ ಮತ್ತು ಪರಿಮಳಯುಕ್ತ ಬೆಳೆಗಳ ಮುಂದುವರಿದ ಕೃಷಿಯತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಮಹಾಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ್ ಮಾತನಾಡಿ, ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯು ಕರ್ನಾಟಕದಲ್ಲಿ ಕೃಷಿ ಮತ್ತು ಕೃಷಿ ಎಂಜಿನಿಯರಿಂಗ್‌ನಲ್ಲಿ ತಂತ್ರಜ್ಞಾನಗಳನ್ನು ಕಲಿಸುವುದು, ಸಂಶೋಧನೆ ಮಾಡುವುದು ಮತ್ತು ಪ್ರಸಾರ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಇದು ಬೆಳೆ ಸುಧಾರಣೆ, ಬೆಳೆ ರಕ್ಷಣೆ ಮತ್ತು ತೊಗರಿ, ಭತ್ತ, ಹತ್ತಿ ಮತ್ತು ಸಣ್ಣ ರಾಗಿ, ಹಣ್ಣುಗಳು ಮತ್ತು ತರಕಾರಿಗಳಿಗೆ ಮೌಲ್ಯ ಸರಪಳಿ ಅಭಿವೃದ್ಧಿಪಡಿಸುವಲ್ಲಿ ತನ್ನ ಅವಿರತ ಪ್ರಯತ್ನವನ್ನು ಮಾಡುತ್ತಿದೆ. ತೊಗರಿ ಪ್ರಭೇದಗಳಾದ ನ್ಯಾಮ್-88, ಜಿಆರ್‌ಜಿ-811, ಜಿಆರ್‌ಜಿ-152 ಮತ್ತು ಟಿಎಸ್ 3ಆರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಾಯೋಗಿಕ ಪ್ರಯತ್ನ ಮಾಡಿದ್ದು ತಮಗೆ ಸಂತಷ ತಂದಿದೆ ಎಂದು ಮಿತ್ತಲ್ ಅವರು ಹರ್ಷ ವ್ಯಕ್ತಪಡಿಸಿದರು. ಗುಲ್ಬರ್ಗಾ ತೊಗರಿಗೆ ಭಾರತ ಸರ್ಕಾರದಿಂದ ಭೌಗೋಳಿಕ ಸೂಚನೆ (ಜಿಐ) ಮೂಲಕ ವಿಶೇಷ ಸ್ಥಾನಮಾನ ಪಡೆಯಲು ವಿಶ್ವವಿದ್ಯಾಲಯವು ಶ್ಲಾಘನೀಯ ಕೊಡುಗೆ ನೀಡಿದೆ ಎಂದರು.
((ರಾಷ್ಟ್ರ ಗೀತೆಗೆ ಅಗೌರವ))
ನಗರದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಯ ಸ್ನಾತಕೊತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ್ ಅವರು ರಾಷ್ಟ್ರಗೀತೆ ಪ್ರಾರಂಭವಾದಗ ಎಲ್ಲರು ಎದ್ದುನಿಂತು ಗೌರವ ಸೂಚನೆ ಮಾಡುತ್ತಿದ್ದರು ಆದರೆ ಡಾ.ಗುರುರಾಜ ಸುಂಕದ್ ಮಾತ್ರ ನಿರಂತರವಾಗಿ ಪೋನ್‌ನಲ್ಲಿ ಮಾತನಾಡುತ್ತಿದ್ದರು. ಇದರಿಂದ ಪಕ್ಕದಲ್ಲಿದ್ದ ಗಣ್ಯರಿಗೆ ಮುಜುಗರ ಎನಿಸಿತು.
((ಬಾಕ್ಸ್ ಮಾಡಿ))
ಮುಂಗಾರು ಮಳೆಯಿಂದಾಗಿ ಮೋಡ ಕವಿದವಾತಾವರಣದ ಹಿನ್ನಲೆಯಲ್ಲಿ ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವಕ್ಕೆ ಆಗಮಿಸಲು ಬಳ್ಳಾರಿ ಜಿಂದಾಲ್‌ವರೆಗೆ ಆಗಮಿಸಿದ್ದ ರಾಜ್ಯಪಾಲ
ಥಾವರ ಚಂದ್ ಗೆಹ್ಲೋಟ್ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರವಾಸ ಧೀಡೀರ್ ರದ್ದುಗೊಂಡಿತು. ಮಳೆಯ ಹಿನ್ನೆಯಲ್ಲಿಯಲ್ಲಿ ಹ್ಯಾಲಿಕ್ಯಾಪ್ಟರ್ ಮೂಲಕ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಗಣ್ಯರು ಮಳೆಯಿಂದಾಗಿ ಮರಳಿ ಹೋಗುವಂತಾಗಿದೆ. ನಿಗಧಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಕೃಷಿ ವಿಶ್ವವಿದ್ಯಾಲಯ ನಿಗಧಿಯಂತೆ ಘಟಿಕೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಕುಲಪತಿ ಡಾ.ಎಂ.ಹನುಮಂತಪ್ಪ,ಕುಲಸಚಿವ ಡಾ.ದುರುಗೇಶ್, ನಿರ್ಗಮಿತ ಕುಲ ಸಚಿವ ಡಾ.ಗುರುರಾಜ್ ಸುಂಕದ ಸೇರಿ ಅನೇಕರು ಇದ್ದರು.