ಜಿಲ್ಲೆ

ಭಾವನೆಗಳ ಜತೆ ಸರ್ಕಾರದ ಚೆಲ್ಲಾಟ

ಇಂದಿರಾ ಎನ್ ಕೆ

ಕಾರ್ಕಳ/ಹೆಬ್ರಿ: ಕಾರ್ಕಳ ತಾಲೂಕಿನ ಸಾರ್ವಜನಿಕರು 9/11 ಕಡತ ಪ್ರಕ್ರಿಯೆಗಾಗಿ ಹತ್ತಾರು ಬಾರಿ ಕಾಪು ತಾಲೂಕಿಗೆ ಅಲೆದಾಡುವ ಪರಿಸ್ಥಿತಿ ಇದೆ. ಸರ್ಕಾರ ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹೆಬ್ರಿ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ಗ್ರಾಪಂ ಮೂಲಕ ಹಂಚಿಕೆಯಾಗಬೇಕಿದ್ದ ಮನೆ ನಿವೇಶನ ಮತ್ತು ಮನೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನ ತಡೆ ಹಿಡಿದಿರುವ ಕಾಂಗ್ರೆಸ್ ಸರ್ಕಾರ, ಖಾಸಗಿಯಾಗಿ ಖರೀದಿ ಮಾಡಿದ ನಿವೇಶನಗಳಲ್ಲಿ ಕೂಡ ಮನೆ ನಿರ್ಮಾಣ ಮಾಡದ ಪರಿಸ್ಥಿತಿ ತಂದೊಡ್ಡಿದೆ ಎಂದರು.

ಹೆಬ್ರಿ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮೀನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಬೋಳ ಸತೀಶ್ ಪೂಜಾರಿ ಹಾಗೂ ಪ್ರಮುಖರಾದ ರವೀಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿ ಸ್ವಾಗತಿಸಿದರು.

ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಪಡಿತರ ಚೀಟಿ ಗೊಂದಲ, ಕಟ್ಟಡ ಸಾಮಗ್ರಿಗಳ ಕೊರತೆ, ಬೆಲೆಯೇರಿಕೆ, ಅಭಿವೃದ್ಧಿ ಕುಂಠಿತದಂತಹ ಅನೇಕ ಸಮಸ್ಯೆಗಳಾಗಿದೆ. ಅವರ ನೆರವಿಗೆ ನಿಂತು ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. -ವಿ.ಸುನೀಲ್ ಕುಮಾರ್ ಶಾಸಕ https://www.vijayavani.net/infrastructure-for-hebri-school https://www.vijayavani.net/social-and-environmental-development-through-increased-presence