ಜಿಲ್ಲೆ

ಸರ್ಕಾರಗಳು ಎಲ್ಲರಿಗೂ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಬೇಕು

ಮೈಸೂರು: ಶಿಕ್ಷಣವು ವ್ಯಕ್ತಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಕಾರ್ಯಕ್ಕೆ ಮುನ್ನುಗ್ಗುವ ಧೈರ್ಯ ಮತ್ತು ಆಲೋಚನೆಯನ್ನು ನೀಡುತ್ತದೆ. ಆರೋಗ್ಯವೂ ಸದೃಢತೆ ಜತೆಗೆ ಉತ್ಸಾಹ ನೀಡುತ್ತದೆ. ಆದ್ದರಿಂದ ಸರ್ಕಾರಗಳು ಎಲ್ಲರಿಗೂ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಬೇಕು. ಆಗ ಮಾತ್ರ, ದೇಶದ ಪ್ರಗತಿ ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿಪ್ರಾಯಪಟ್ಟರು.

ನಗರದ ಕರಾಮುವಿ ಘಟಿಕೋತ್ಸವ ಭವನದಲ್ಲಿ ‘ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ -317’ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ಪ್ರಥಮ ವಾರ್ಷಿಕ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಆದ್ದರಿಂದ ಚುನಾವಣೆ ವೇಳೆಯಲ್ಲಿ ಘೋಷಣೆ ಮಾಡುವ ಉಚಿತ ಕೊಡುಗೆಗಳು, ಗ್ಯಾರಂಟಿಗಳಿಗಿಂತ ಜನರಿಗೆ ಸಮಾನ ಆರೋಗ್ಯ ಮತ್ತು ಸಮಾನ ಶಿಕ್ಷಣದ ಅಗತ್ಯವಿದೆ ಎಂದರು.

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳು ಪ್ರಸ್ತುತ ವ್ಯಾಪಾರೀಕರಣಕ್ಕೆ ಒಳಗಾಗಿದ್ದು, ನಾಯಕರ ಕಪಿಮುಷ್ಠಿಯಲ್ಲಿವೆ. ಜನರನ್ನು ನಿರಂತರವಾಗಿ ವಂಚಿಸುವ ಕೆಲಸವಾಗುತ್ತಿದೆ. ಸಾರ್ವಜನಿಕರು ಜಾಗೃತರಾಗದ ಹೊರತು ಇಂತಹ ವಂಚನೆ ನಿಲ್ಲುವುದಿಲ್ಲ ಎಂದು ಅವರು ಎಚ್ಚರಿಸಿದರು.