ಜಿಲ್ಲೆ

ಸರ್ಕಾರಿ ಮಹಿಳಾ ಕಾಲೇಜು ಸ್ಥಳಾಂತರ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅತಿಯಾದ ಮಳೆಯಿಂದ ಸೋರುತ್ತಿದ್ದ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಆವರಣದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪೀಠೋಪಕರಣಗಳನ್ನು ಸೋಮವಾರ ಸ್ಥಳಾಂತರ ಮಾಡಲಾಯಿತು.
ಹಳೆಯ ಕಟ್ಟಡದಲ್ಲಿ ಬಿಎ, ಬಿಕಾಂ, ಬಿಎಸ್.ಸಿ, ಫ್ಯಾಷನ್ ಟೆಕ್ನಾಲಜಿ ಪದವಿಗಳು 350 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಹಳೆಯ ಕಟ್ಟಡ ಸೋರುತ್ತಿತ್ತು. ಇತ್ತೀಚೆಗೆ ಜಿಲ್ಲಾಽಕಾರಿ ದಿವ್ಯ ಪ್ರಭು ಭೇಟಿ ನೀಡಿ ಪರಿಶೀಲಿಸಿದ್ದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವರ್ಗಗಳನ್ನು ಸ್ಥಳಾಂತರ ಮಾಡುವ ಭರವಸೆ ನೀಡಿದ್ದರು. ಜಿಲ್ಲಾಽಕಾರಿ ಆದೇಶದ ಮೇರೆಗೆ ಕಾಲೇಜು ಸಾಮಗ್ರಿಗಳನ್ನು ಯುಪಿಎಸ್ ಹೈಸ್ಕೂಲ್ ಮತ್ತು ಡಯಟ್ ಅವರಣದ ಕೊಠಡಿಗಳಿಗೆ ಸ್ಥಳಾಂತರ ಮಾಡಲಾಯಿತು.