ಜಮಖಂಡಿಯಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. ಮೌಲಾನಾ ಅಲ್ತಾಖಾನ್ ಮದನಿ, ಹಾಪೀಜ್ ಅಬ್ದುಲ್ ಹಮೀದ್, ಮೌಲಾನಾ ಇಸಾ, ಮೌಲಾನಾ ಅನೀಸ್, ಮೌಲಾನಾ ಮುಫ್ತಿ ಹಾರೂನ, ಮೌಲಾನಾ ಾರೂಕ್ ಮತ್ತಿತರರಿದ್ದಾರೆ. 
ಜಿಲ್ಲೆ

ವಕ್ಫ್ ವಿಷಯದಲ್ಲಿ ಸರ್ಕಾರ ಮೂಗು ತೂರಿಸಬಾರದು

ಜಮಖಂಡಿ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಾಲೂಕು ಸಮಿತಿ ವತಿಯಿಂದ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನಾಕಾರರು ನಗರದ ಶಾ ಆಲಂ ಗೇಟ್‌ನಿಂದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ವಕ್ಫ್ ನೂತನ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಘೋಷಣೆ ಕೂಗುತ್ತ ದೇಸಾಯಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರ ತಡೆದು ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಮೌಲಾನಾ ಅಲ್ತಾಖಾನ್ ಮದನಿ ಮಾತನಾಡಿ, ನಮ್ಮ ದೇಶದ ವಕ್ಫ್ ಕಾಯ್ದೆಗೆ ಶತಮಾನದ ಇತಿಹಾಸವಿದೆ. ಮುಸ್ಲಿಂ ಸಮುದಾಯದ ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಅಲ್ಹಾನ ಹೆಸರಿನಲ್ಲಿ ದಾನ ಮಾಡುವ ಆಸ್ತಿಗಳೇ ವಕ್ಫ್ ಆಸ್ತಿಗಳಾಗಿವೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವಕ್ಫ್ ಕಾಯ್ದೆ ತಿದ್ದುಪಡಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಆಸ್ತಿ ಹಿಡಿತಕ್ಕೆ ತೆಗೆದುಕೊಳ್ಳುವ ವ್ಯವಸ್ಥಿತವಾದ ಪಿತೂರಿ ನಡೆಸಿದೆ ಎಂದರು.

ಮುಸಲ್ಮಾನರ ಮೂಲಭೂತ ಹಕ್ಕುಗಳನ್ನು ಮೊಟುಕುಗೊಳಿಸುವ ಮತ್ತು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಿದ್ದು, ಮುಸ್ಲಿಂ ಸಂಸದರನ್ನೇ ಹೊಂದಿರದ ಆಡಳಿತ ಪಕ್ಷ ನಮ್ಮ ಸಮುದಾಯದ ಹಿತವನ್ನು ಹೇಗೆ ಕಾಯುತ್ತದೆ?ಎಂದು ಪ್ರಶ್ನಿಸಿದರು.

ಈ ಹೋರಾಟ ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಕೇವಲ ಒಂದು ಕಾನೂನಿನ ವಿರುದ್ಧವಾಗಿದೆ ಎಂದರು.

ಕ್ಫ್ ಕಾಯ್ದೆ ಲೋಪದೋಷಗಳಿಂದ ಕೂಡಿದೆ. ಮಂಡಳಿಯಲ್ಲಿ ಮುಸ್ಲಿಮೇತರರಿಗೂ ಅವಕಾಶ ಕೊಡುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ನಮ್ಮ ಆಸ್ತಿ ಉಳಿಸಿಕೊಳ್ಳಲು ದೇಶದಾದ್ಯಂತ ಹೋರಾಟ ಮಾಡುತ್ತಿದ್ದೇವೆ. ತಿದ್ದುಪಡಿ ಮಾಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಹಾಪೀಜ್ ಅಬ್ದುಲ್ ಹಮೀದ್, ಮೌಲಾನಾ ಇಸಾ, ಮೌಲಾನಾ ಅನೀಸ್, ಮೌಲಾನಾ ಮುಫ್ತಿ ಹಾರೂನ, ಮೌಲಾನಾ ಾರೂಕ್, ಮೌಲಾನಾ ಮುಜಮ್ಮೀಲ, ಮೌಲಾನಾ ಸರ್ರಾಜ, ಇಲಾಹಿ ಝೆಂಡೆ, ತೌಫೀಕ ಪಾರ್ಥನಳ್ಳಿ, ಝಾಕೀರಹುಸೇನ್ ನಧಾಪ, ನಜೀರ ಕಂಗನೊಳ್ಳಿ, ದಿಲಾವರ ಶಿರೋಳ, ಬದ್ರೋದ್ದಿನ ಪೆಂಡಾರಿ, ಅನ್ವರ ಮೋಮಿನ, ಮುಬಾರಕ ಅಪರಾದ, ನಸರೋದ್ದಿನ ಜಮಾದಾರ, ಮೌಲಾಸಾಬ ನದಾ, ಖೀಜರ ಪೆಂಡಾರಿ, ಅಬ್ದುಲ ಜಮಾದಾರ, ರಾಜು ಮಸಳಿ, ಅಬೂಬಕರ ಕುಡಚಿ, ಸಲೀಂ ಅವಟಿ, ನಬಿಸಾಬ ಪೆಂಡಾರಿ, ಬಿಲಾಲ ಖಾಟಿಕ, ಸಾಧಿಕ ಬಂಟನೂರ, ಅಯ್ಯುಬ್ ಗದಗ ಮತ್ತಿತರರಿದ್ದರು.