ಬೆಂಗಳೂರು ಸರ್ಕಾರಿ ಶಾಲೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ಜತೆಗೆ ಜೀವನದ ಕುರಿತು ಮಕ್ಕಳಲ್ಲಿ ಹಠ, ಛಲ, ಉತ್ಸಾಹವನ್ನು ಹುಟ್ಟಿ ಹಾಕಿದಾಗ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವಾಗಲಿದೆ ಎಂದು ಬೆಂಗಳುರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆ, ಬೆಂ.ನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಾನು ಓದಿದ ಶಾಲೆಯೊಂದನ್ನು ದತ್ತು ತೆಗೆದುಕೊಳ್ಳುವ ವಿಚಾರವಾಗಿ ಅಲ್ಲಿನ ಶಿಕ್ಷಕರನ್ನು ಮಾತನಾಡಿಸಿದಾಗ ಹೆಚ್ಚಿನ ಶಿಕ್ಷಕರು ‘ಅಯ್ಯೋ ಏಕೆ ಈ ಕೆಲಸ ಮಾಡ್ತೀರಾ ಸಾರ್, ಇಲ್ಲಿನ ಪಾಲಕರು ಕುಡಿದು ಹಾಳಾಗುತ್ತಿದ್ದಾರೆ’ ಎಂಬ ನಕಾರಾತ್ಮಕ ಧೋರಣೆಯನ್ನು ಹೊಂದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಉತ್ಸಾಹವಿಲ್ಲ ಸಿಗುತ್ತಿಲ್ಲ ಎಂಬ ನಿರ್ಲಕ್ಷ್ಯ ಮನೋಭಾವ ಹೊಂದಿದ್ದಾರೆ. ಇಂತಹ ಮನೋಭಾವದಿಂದ ಹೊರ ಬಂದು ಯೋಚಿಸಬೇಕಿದೆ ಎಂದರು.
ಲಿತಾಂಶದ ಜತೆಗೆ ಉತ್ತಮ ಸಮಾಜ ನಿರ್ಮಾಣ:
ಸ್ವತಃ ನಾನು ಕೂಡ ಶಾಲಾ ಶಿಕ್ಷಕನಾಗಿ ಎರಡು ವರ್ಷಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಶಿಕ್ಷಕರ ಸಮಸ್ಯೆ ಏನೆಂದು ನನಗೆ ತಿಳಿದಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುವುದರಿಂದ ಅಂತಹ ಮಕ್ಕಳಲ್ಲಿ ಭವಿಷ್ಯದ ಜೀವನ ಕುರಿತು ಆಲೋಚನೆ ಮಾಡುವಂತಹ ಮತ್ತು ಯಾಕಾಗಿ ಶಿಕ್ಷಣ ನೀಡುತ್ತಿದ್ದೇವೆಂಬ ಅನಿವಾರ್ಯತೆಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿದಾಗ ಉತ್ತಮ ಲಿತಾಂಶ ಪಡೆಯುವ ಜತೆಗೆ ಉತ್ತಮ ಸಮಾಜ ಕೂಡ ನಿರ್ಮಿಸಬಹುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್. ಲತಾಕುಮಾರಿ ಮಾತನಾಡಿ, ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಪೈಕಿ ಬೆಂಗಳೂರು ನಗರವು 12ನೇ ಸ್ಥಾನದಲ್ಲಿದೆ. ಅದನ್ನು ಈ ಬಾರಿ ಶೇ.100 ಲಿತಾಂಶ ನೀಡುವ ಮೂಲಕ ಮೊದಲನೇ ಸ್ಥಾನಕ್ಕೆ ಇರುವ ಇಚ್ಛಾಶಕ್ತಿಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಅಮಾಜದ ಅನಿಷ್ಠಗಳನ್ನು ತೊಡೆದುಹಾಕಿ:
ಉತ್ಸಾಹಿ ಶಿಕ್ಷಕ ಮಾತ್ರ ತರಗತಿಗಳನ್ನು ಸಂತಸದಿಂದ ಇಡಲು ಸಾಧ್ಯ. ಹೀಗಾಗಿ, ಮೊದಲು ಶಿಕ್ಷಕರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವ ಜತೆಗೆ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಗಳನ್ನು ತೊಡೆದುಹಾಕಲು ತಮ್ಮ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟು ಕೆಲಸ ಮಾಡುವ ಶಿಕ್ಷಕರ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 12 ಮಂದಿ ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.