ಜಿಲ್ಲೆ

ಸರ್ಕಾರಿ ಶಾಲೆ ಜಾಗ ಒತ್ತುವರಿ ತಡೆಗೆ ಕೊಟ್ಟೂರು ಎಸ್ಡಿಎಂಸಿ ಸಮನ್ವಯ ವೇದಿಕೆ ಆಗ್ರಹ

Ballari

ಕೊಟ್ಟೂರು: ಸರ್ಕಾರಿ ಶಾಲೆ ಜಾಗ ಒತ್ತುವರಿ ತಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ತಾಲೂಕು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಗುರುವಾರ ಮನವಿ ಸಲ್ಲಿಸಿತು.

ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್.ಹರೀಶ್ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು. ಶಾಲಾವರಣ ಹಾಗೂ ಶಾಲಾ ಜಾಗವನ್ನು ಅತಿಕ್ರಮವಾಗದಂತೆ ಕಾಪಾಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯ ಸಕಾಲಕ್ಕೆ ಒದಗಿಸಲು ಕ್ರಮ ಕೈಗೊಳ್ಳುವುದು. ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಇಲಾಖೆ ಏರ್ಪಡಿಸುವ ವಿಜ್ಞಾನ ಮೇಳ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ವಿಜ್ಞಾನ ಕ್ಲಬ್ ಸೇರಿ ಇತರ ವಿಷಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಪ್ರತಿ ವರ್ಷ ಮೂರು ಬಾರಿ ಪಾಲಕರ ಸಭೆ ನಡೆಸಬೇಕು ಎಂದು ಆಗ್ರಹಿಸಿದರು. ವೇದಿಕೆ ಜಿಲ್ಲಾ ಅಧ್ಯಕ್ಷ ಜಿ.ರಾಘವೇಂದ್ರ, ಸದಸ್ಯರಾದ ಟಿ.ನಿಂಗಪ್ಪ, ಕೆ.ಬಸವರಾಜ್, ಟಿ.ನಾಗರಾಜ್, ಬಿ.ಮಂಜುನಾಥ್, ಕೆ.ಗುರು ಬಸವರಾಜ್, ಮಲ್ಲೆಪ್ಪ, ಜೆ.ನಂದಿನಿ, ಎನ್.ರಾಜಪ್ಪ, ಕೆ.ಕೊಟ್ರೇಶ, ಕೆ.ಗಂಗಮ್ಮ, ಕೆ.ಕಾಸಿಂ, ಬಿ.ಯಶೋದಾ, ಸಿದ್ದೇಶ ಇತರರಿದ್ದರು.