ಜಿಲ್ಲೆ

ಸರ್ಕಾರಿ ಶಾಲೆ ಪ್ರವೇಶಾತಿ ಆರಂಭ

ಸೋಮನಾಥ ರೆಡ್ಡಿ

ಮುಂಡರಗಿ: ತಾಲೂಕಿನ ಮಕ್ತುಂಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಹೂಗುಚ್ಛ ನೀಡಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.

ಮುಖ್ಯಶಿಕ್ಷಕ ವಿ.ಆರ್. ಕುರಡಗಿ ಮಾತನಾಡಿ, ಶಾಲೆಯ ಪ್ರಾರಂಭೋತ್ಸವದ ಮೊದಲ ದಿನವೇ ಅತಿಹೆಚ್ಚಿನ ಮಕ್ಕಳು ಲವಲವಿಕೆಯಿಂದ ಶಾಲೆಗೆ ಆಗಮಿಸಿದ್ದು ಸಂತಸ ತಂದಿದೆ. ತರಗತಿಗಳು ಪ್ರಾರಂಭವಾಗುವುದರ ಜತೆಗೆ ಒಂದನೇ ತರಗತಿಯಿಂದ 7ನೇ ತರಗತಿವರೆಗೂ ತರಗತಿಗೆ ಪ್ರವೇಶ ಪ್ರಾರಂಭವಾಗಿದ್ದು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರಫೀಕ್‌ಸಾಬ್ ಮಕಾಂದಾರ ಮಾತನಾಡಿ, ಶಾಲೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ಗ್ರಾ.ಪಂ.ಸದಸ್ಯ ಅಂದಪ್ಪ ತಿಪ್ಪಣ್ಣವರ, ಶರಣಪ್ಪ ಹೊಸಮನಿ, ಶಿವು ವಾಲಿಕಾರ, ಶಿಕ್ಷಕಿ ಎ.ಆರ್. ಕೊಟ್ಟೂರುಶೆಟ್ಟರ ಮಾತನಾಡಿದರು. ಸಹ ಶಿಕ್ಷಕಿಯರಾದ ಜಿ.ಟಿ. ಸಿದ್ದಾಪೂರ, ಎಸ್.ವಿ. ಡೊಳ್ಳಿನ ಇತರರಿದ್ದರು.