ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿ ವೈನ್ಶಾಪ್ಗಳಲ್ಲಿ ಮಾತ್ರ ಪಾನಪ್ರಿಯರಿಗೆ ಮದ್ಯ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಆದರೀಗ ಜಿಲ್ಲೆಯ ಬಾರ್ಗಳಲ್ಲೂ ರಾಜಾರೋಷವಾಗಿ ಎಣ್ಣೆಪಾರ್ಟಿ ನಡೆಯುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ಕರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ಡೌನ್ ಅವಧಿಯಲ್ಲಿ ಜಿಲ್ಲಾದ್ಯಂತ ಎಂಎಸ್ಐಎಲ್ ಮಳಿಗೆ ಸೇರಿ ವೈನ್ಶಾಪ್, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಬಂದ್ ಮಾಡಿತ್ತು. ಇದರಿಂದ ಮದ್ಯಪ್ರಿಯರಿಗೆ ತೊಂದರೆ ಆಗಿದ್ದಲ್ಲದೆ ರಾಜ್ಯದ ಬೊಕ್ಕಸಕ್ಕೂ ಬಲವಾದ ಪೆಟ್ಟು ಬಿದ್ದಿತ್ತು. ಸರಿಯಾಗಿ ಒಂದು ತಿಂಗಳ ನಂತರ ಹಲವು ಷರತ್ತುಗಳೊಂದಿಗೆ ಸಕರ್ಾರ ವೈನ್ಶಾಪ್ಗಳ (ಸಿಎಲ್-7) ಹಾಗೂ ಎಂಎಸ್ಐಲ್ ಮದ್ಯದ ಮಳಿಗೆಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಅದೂ ಪರಸ್ಪರ ಅಂತರ ಕಾಪಾಡಿಕೊಂಡು ಪಾಸರ್ೆಲ್ ಕೊಂಡೊಯ್ಯಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ.
ಆದರೆ ಜಿಲ್ಲೆಯಲ್ಲಿ ಸರ್ಕಾರ ವಿಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಬಾರ್ಗಳ ಹಿಂದೆ ಮದ್ಯಪ್ರಿಯರು ಬಿಂದಾಸ್ ಎಣ್ಣೆ ಹೊಡೆಯುತ್ತಿದ್ದು, ಪರಸ್ಪರ ಅಂತರಕ್ಕೆ ಸಂಪೂರ್ಣ ಎಳ್ಳುನೀರು ಬಿಟ್ಟಿದ್ದಾರೆ. ಅಲ್ಲದೆ ಮದಿರೆ ಮತ್ತಿನಲ್ಲಿ ಜಗಳವಾಡಿಕೊಂಡು ಹೊಡಿಪೆಟ್ಟುಗಳು ಆಗುತ್ತಿವೆ. ಹೀಗಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಇದಕ್ಕೂ ತನಗೂ ಯಾವುದೇ ರೀತಿಯ ಸಂಬಂಧವಿಲ್ಲದಂತೆ ನಿದ್ರಾವಸ್ಥೆಗೆ ಜಾರಿರುವುದು ವರ್ತಮಾನದ ದುರಂತ.
ಮುಖ್ಯ ರಸ್ತೆಯಲ್ಲಿ ಕರಿದ ಎಣ್ಣೆ ಪದಾರ್ಥಗಳನ್ನು ತೆಗೆದುಕೊಂಡು ಬಾರ್ನಲ್ಲಿ ಮದ್ಯ ಖರೀದಿಸುವ ಪಾನಪ್ರಿಯರು, ಅದೇ ಬಾರ್ನವರು ಹಿಂಭಾಗದಲ್ಲಿ ಹಾಕಿರುವ ಟೇಬಲ್ಗಳಲ್ಲಿ ಪರಸ್ಪರ ಅಂತರವಿಲ್ಲದೆ ಕಿಕ್ ಏರಿಸಿಕೊಳ್ಳುತ್ತಿದ್ದಾರೆ. ಒಂದೊಂದು ಟೇಬಲ್ಗೆ ಕನಿಷ್ಠ 5-6 ಜನ ಕುಳಿತು ಪಾಟರ್ಿ ಮಾಡುತ್ತಿರುವ ದೃಶ್ಯ ಜಿಲ್ಲಾ ಕೇಂದ್ರದಲ್ಲಿ ಕಾಮನ್ ಆಗಿದೆ.
ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದೆ. ಮುಂಬೈನಿಂದ ಬಂದ ಕಾಮರ್ಿಕರಿಂದ ಗಿರಿ ಜಿಲ್ಲೆ ರೆಡ್ ಜೋನ್ಗೆ ವಾಲಿದೆ. ಮೆಡಿಕಲ್ ಬುಲೆಟಿನ್ನಲ್ಲಿ ನಿತ್ಯ 5-10 ಪಾಸಿಟಿವ್ ಪ್ರಕರಣ ದೃಢಪಡುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಬಾರ್ ಮಾಲೀಕರು ಕ್ಯಾರೆ ಎನ್ನದಿರುವುದು ಅಬಕಾರಿ ಇಲಾಖೆಯೊಂದಿಗೆ ಒಳಗೊಳಗೆ ಅಡ್ಜೆಸ್ಟ್ ಆಗಿದ್ದಾರಾ ಎಂಬ ಅನುಮಾನ ಮೂಡಿಸಿದೆ.
ಯಾದಗಿರಿ ಸಿಟಿ ಬಸ್ ನಿಲ್ದಾಣದ ಎದುರಿನ ಬಾರ್ವೊಂದರ ಹಿಂಭಾಗದಲ್ಲಿ ಮಂಗಳವಾರ ಪಾನಪ್ರಿಯರು ನೀಟಾಗಿ ಎಣ್ಣೆ ಹೊಡೆಯುತ್ತಿದ್ದರು. ಇದರಲ್ಲಿ ಕೆಲವರು ತಮ್ಮೊದರೊಳಗೆ ಜಗಳಕ್ಕಿಳಿದಿದ್ದರು. ಒಬ್ಬರ ಬಳಿಯೂ ಮಾಸ್ಕ್ ಇರಲಿಲ್ಲ. ಪರಸ್ಪರ ಅಂತರವಂತೂ ಎಣ್ಣೆ ಏಟಿನಲ್ಲಿ ಮಾಯವಾಗಿತ್ತು. ಈ ಬಗ್ಗೆ `ವಿಜಯವಾಣಿ' ಜಿಲ್ಲೆಯ ಅಬಕಾರಿ ಡಿಸಿ ನಿರ್ಮಲ ಅವರ ಗಮನಕ್ಕೆ ತಂದರೆ, ದೂರು ನೀಡಿ ಎಂದು ಪುಕ್ಕಟೆ ಸಲಹೆ ನೀಡಿದ್ದು, ಇಲಾಖೆ ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸಿದಂತಾಗಿದೆ.
ಸಾಮಾಜಿಕ ಬದ್ಧತೆ ನಿಮ್ಮಲ್ಲೂ ಬರಲಿ
ವೈನ್ಶಾಪ್ ಮತ್ತು ಬಾರ್ಗಳ ಮಾಲೀಕರು ನಾಗರಿಕ ಸಮಾಜದಲ್ಲೇ ವ್ಯವಹಾರ ನಡೆಸುತ್ತಿದ್ದೇವೆ ಎಂಬುದನ್ನು ಮೊದಲು ಅರಿತುಕೊಳ್ಳುವ ಅಗತ್ಯವಿದೆ. ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದೆ. ಇನ್ನು ಜಿಲ್ಲಾಡಳಿತ ಮತ್ತು ಅದರ ಅಧೀನದ ಅಧಿಕಾರಿಗಳು ಮನೆ ಮತ್ತು ತಮ್ಮ ವೈಯಕ್ತಿಕ ಜೀವನ ಮರೆತು ಕೆಲಸ ಮಾಡುತ್ತಿದ್ದಾರೆ. ಆದರೆ ಹಣದಾಸೆಗಾಗಿ ಬಾರ್ ಮಾಲೀಕರು ಸಕರ್ಾರದ ಧ್ಯೇಯವನ್ನು ಮರೆತರೆ ಅವರಿಗೂ, ಪ್ರಾಣಿಗಳಿಗೂ ಯಾವ ವ್ಯತ್ಯಾಸ ಇರದು ಎಂಬುದು ಪ್ರಜ್ಞಾವಂತರ ಆಕ್ರೋಶದ ಅಭಿಪ್ರಾಯವಾಗಿದೆ.