ಮಸ್ಕಿ ಗಚ್ಚಿನ ಹಿರೇಮಠದಲ್ಲಿ ವಿಡಿಯೋ ಮತ್ತು ಪೋಟೋಗ್ರಾಫ್‌ರಗಳ ಸಂಘ ಆಯೋಜಿಸಿದ್ದ ವಿಶ್ವ ಛಾಯಗ್ರಾಹಕರ ದಿನಾಚರಣೆಗೆ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು. ತಾಲೂಕು ಅಧ್ಯಕ್ಷ ಅಮರೇಶ, ಪ್ರಮುಖರಾದ ಶ್ರೀ ಶೈಲ, ಅಜ್ಮೀರ್, ಅಮರೇಶ, ರವಿಕುಮಾರ, ಬಸವರಾಜ, ಕರಿಯಪ್ಪ, ನೀಲಕಂಠಪ್ಪ, ಚಾಂದಸಾಬ್ ಹಾಗೂ ಇತರರು ಇದ್ದರು. 
ಜಿಲ್ಲೆ

ಸಮಸ್ಯೆಗಳಿಗೆ ಸ್ಪಂದಿಸಲಿ ಸರ್ಕಾರ

ರುದ್ರಪ್ಪ ವಾಲಿ

ಮಸ್ಕಿ: ಮೊಬೈಲ್ ಹಾವಳಿಯಿಂದ ಪೋಟೋಗ್ರಾಫರ್‌ಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಮದುವೆ ಹಾಗೂ ಸಮಾರಂಭಗಳಿಗೆ ಮಾತ್ರ ಫೋಟೋ ಗ್ರಾಫರ್‌ಗಳಿಗೆ ಕೆಲಸ ಎನ್ನುವಂತಾಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಗುರುವಾರ ಆಯೋಜಿಸಿದ್ದ ವಿಡಿಯೋ ಮತ್ತು ಪೋಟೋಗ್ರಾಫ್‌ರಗಳ ಸಂಘ ಆಯೋಜಿಸಿದ್ದ ವಿಶ್ವ ಛಾಯಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಪೋಟೋ ಗ್ರಾಫರ್‌ಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ, ಕತ್ತಲು ಮತ್ತು ಬೆಳಕಿನ ಸಂಯೋಜನೆಯಿಂದ ಅದ್ಭುತವಾದ ಜಗತ್ತನ್ನು ಚಿತ್ರಗಳ ಮೂಲಕ ಸೆರೆ ಹಿಡಿಯುವ ಕಲೆ ಪೋಟೋಗ್ರಾಫ್‌ರಗಳಿಗೆ ಸಿದ್ದಿಸಿರುತ್ತದೆ ಎಂದರು.