ಜಿಲ್ಲೆ

ಸರ್ಕಾರದಿಂದ ಜನೌಷಧ ಕೇಂದ್ರ ಮುಚ್ಚುವ ಹುನ್ನಾರ

ಬೆಳಗಾವಿ: ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಔಷಧ ದೊರೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳು ಕಾಂಗ್ರೆಸ್​ ಸರ್ಕಾರ ಮುಚ್ಚುವ ಸ್ಥಿತಿಗೆ ತಂದಿದೆ ಎಂದು ಸಂಸದ ಜಗದೀಶ ಶೆಟ್ಟರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನೌಷಧ ಕೇಂದ್ರ ಆರಂಭಿಸಲು ಸಲ್ಲಿಸಿದ 31 ಅರ್ಜಿಗಳನ್ನು ತಳ್ಳಿ ಹಾಕಿರುವ ಮೂಲಕ ಪ್ರಧಾನಮಂತ್ರಿ ಜನೌಷಧ ಯೋಜನೆಯ ಉದ್ದೇಶ ಕುಗ್ಗಿಸುವ ಹುನ್ನಾರ ನಡೆಸಿದೆ. ಕೇಂದ್ರ

ಮತ್ತು ರಾಜ್ಯದ ಆರೋಗ್ಯ ಯೋಜನೆಗಳ ನಡುವೆ ಸಹಕಾರದ ಕೂೆ ರತ ಯೆ ುನು ್ನ ಇದು ಎತಿ ್ತ ತೂೆ ರಿಸು ತದ್ತ .ೆ ನೀತಿ ಪಾಲನ ೆ ಹಸೆ ರಿ ನಲಿ ್ಲ ಕಾಂಗ್ರಸೆ ್​ ಸಕ ಾರ್ರ ಖರ್ಚು ಬರಿಸಲಾಗದೆ ತಮ್ಮ ಅಸಹಾಯಕತೆಯನ್ನು ಬಡವರು ಮತ್ತು ಮಧ್ಯಮ ವರ್ಗದವರ ಜೀವ ರಕವಾದ ಜನೌಷಧ ಮಳಿಗೆ ಮುಚ್ಚುವುದರ ಮುಖಾಂತರ

ತೋರಿಸುತ್ತಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವರು ಸರಿಯಾದ ಮಾರ್ಗಸೂಚಿ ಅನುಸರಿಸಬೇಕು. ಜನಪ್ರಿಯ ಯೋಜನೆಯ

ಮೊಟಕುಗೊಳಿಸಬಾರದು ಎಂದು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.