ರಾಯಬಾಗ: ಕರೊನಾದಿಂದ ಸಂಕಷ್ಟಕ್ಕೆ ಒಳಗಾದ ಎಲ್ಲ ವರ್ಗದ ಜನರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಸದುಪಯೋಗ ಪಡೆಯಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.
ಪಟ್ಟಣದಲ್ಲಿ ಶನಿವಾರ ನೀರಾವರಿ ನಿಗಮದಿಂದ ಮಂಜೂರಾದ ಸುಮಾರು 67 ಲಕ್ಷ ರೂ. ವೆಚ್ಚದ ಜೆಎಲ್‌ಬಿಸಿ ಕಚೇರಿ ಆವರಣದ ಗೋಡೆ ನಿರ್ಮಾಣ, ಪ್ರವಾಸಿ ಮಂದಿರ ಸುಧಾರಣೆ ಹಾಗೂ ಜೆಎಲ್‌ಬಿಸಿ ಕೆನಾಲ್‌ಗೆ ಧೋಬಿ ಘಾಟ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಯಬಾಗ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಕಷ್ಟು ಅನುದಾನ ಮಂಜೂರು ಮಾಡಲಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದರು.
ಜೆಎಲ್‌ಬಿಸಿ ಅಧಿಕಾರಿ ಎಚ್.ಎಲ್.ಪೂಜಾರಿ, ಅಣ್ಣಾಸಾಬ ಖೇಮಲಾಪುರೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ನಿಂಗಪ್ಪ ಪಕಾಂಡಿ, ಜಿಯಾವುಲ್ಲಾ ಮುಲ್ಲಾ, ವಸಂತ ಕಾಂಬಳೆ, ಸುರೇಶ ಮಾಳಿ, ಸಿದ್ದು ದಾಮೋಜಿ, ಭಾರತಿ ಲೋಹಾರ, ಮಹೇಶ ಕರಮಡಿ, ಸುರೇಶ ಕೋಕಾಟೆ, ನಿವಾಸ ಕಾಂಬಳೆ ಇತರರು ಉಪಸ್ಥಿತರಿದ್ದರು.