ಗಂಗಾವತಿ: ಅಂಗವಿಕಲರ ಸಬಲೀಕರಣಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಹೇಳಿದರು.
ನಗರದ ವಿದ್ಯಾನಗರ ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲಿಕರಣ ಇಲಾಖೆ, ಡಾ.ಎಸ್.ವಿ.ಸವಡಿ ಆಯುರ್ವೇದಿಕ್ ಆಸ್ಪತ್ರೆ ಮತ್ತು ಬೆಂಗಳೂರಿನ ಆಲಿಂಕೋ ಸಂಸ್ಥೆ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ಮೌಲ್ಯಮಾಪನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಗಳಿದ್ದು, ಇಲಾಖೆ ಸಹಯೋಗದೊಂದಿಗೆ ಪಡೆದುಕೊಳ್ಳಬೇಕು ಎಂದರು.
ಅಂಗವಿಕಲರ ಒಕ್ಕೂಟದ ಪ್ರತಿನಿಧಿ ಮಂಜುನಾಥ ಹೊಸ್ಕೇರಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮಹತ್ವಕಾಂಕ್ಷಿಯ ವಯೋಶ್ರೀ ಯೋಜನೆಯಿಂದ ಅಂಗವಿಕಲರಿಗೆ ಅನುಕೂಲವಾಗಿದ್ದು, ಪ್ರಸಕ್ತ ಶಿಬಿರದಲ್ಲಿ 230 ಪಲಾನುಭವಿಗಳನ್ನು ತಪಾಸಣೆ ಮಾಡಲಾಗಿದೆ ಎಂದರು.
ಕಾಲೇಜಿನ ಆಡಳಿತಾಧಿಕಾರಿ ಡಾ.ಎಸ್.ವಿ.ಬಸವರಾಜ ಸವಡಿ, ನಿರ್ದೇಶಕಿ ಡಾ. ನಿರ್ಮಲಾ ಸವಡಿ ಅಲಿಂಕೋ ಸಂಸ್ಥೆ ಮುಖ್ಯಸ್ಥ ರೋಹಿತ್, ತಾಲೂಕು ಪುನರ್ವಸತಿ ಕಾರ್ಯಕರ್ತೆ ಮಂಜುಳಾ ಪುರಾಣಿಕ ಮಠ, ಜಿಲ್ಲಾ ಸಂಯೋಜಕ ಟೇಕರಾಜ್, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರಾದ ಹುಲುಗಪ್ಪ ಕಾಗೇರಿ, ಬಸವರಾಜ ಗೋನಾಳ್, ಚಿದಾನಂದ, ಅಯ್ಯಣ್ಣ, ಪಾಂಡುರಂಗ, ಈರಣ್ಣ ಆನೆಗುಂದಿ, ಶ್ರೀಲಶ್ರೀ, ವೀರಮ್ಮ, ಯಮನಮ್ಮ, ಶಮೀಯಾ, ಯಂಕಮ್ಮ ಹಣವಾಳ, ಸಿದ್ದಲಿಂಗಮ್ಮ, ಮಹಾದೇವಿ ಇತರರಿದ್ದರು.