ಜಿಲ್ಲೆ

ಶೀಘ್ರ ಸರ್ಕಾರಿ ಮಾಂಟೆಸ್ಸರಿ ಆರಂಭ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ 65 ಸ್ಮಾರ್ಟ್​ ಕ್ಲಾಸ್​ಗಳನ್ನು ತೆರೆಯಲಾಗಿದೆ. ಅತೀ ಹೆಚ್ಚು ಅಂಗನವಾಡಿಗಳನ್ನು ಕಟ್ಟಿಸಿದ್ದೇವೆ. ಬರುವ ದಿನಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲಾಗುತ್ತಿದೆ. ಇದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

ತಾಲೂಕಿನ ಬಡಸ ಕೆ.ಎಚ್​. ಗ್ರಾಮದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹೇಳಿದಂತೆ ಹಳ್ಳಿ ಸುಧಾರಣೆಯಾದಾಗ ಮಾತ್ರ ದೇಶ ಸುಧಾರಣೆಯಾಗುತ್ತದೆ. ಮನಮೋಹನ ಸಿಂಗ್​ ನರೇಗಾ ತಂದ ನಂತರ ಗ್ರಾಪಂಗಳಿಗೆ ಹೆಚ್ಚು ಶಕ್ತಿ ಬಂದಿದೆ. ಈಗ ಎಲ್ಲದಕ್ಕೂ ಗ್ರಾಪಂ ಅವಲಂಬಿಸಲಾಗುತ್ತಿದ್ದು, ಹೆಚ್ಚಿನ ಬಲ ಬಂದಿದೆ ಎಂದರು.

ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನೂತನ ಕಟ್ಟಡ ಗ್ರಾಮದ ಬಹುದಿನಗಳ ಬೇಡಿಕೆಯಾಗಿತ್ತು. ಸಚಿವರ ಮಾರ್ಗದರ್ಶನದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದರು. ಮಡಿವಾಳೇಶ್ವರ ಮಠದ ಶ್ರೀ ಪ್ರಶಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ತಾಪಂ ಇಒ ಪ್ರದಿಪ ಸಾವಂತ, ಗ್ರಾಪಂ ಅಧ್ಯಕ್ಷ ನಾಗಪ್ಪ ಕುರುಬರ, ಉಪಾಧ್ಯ ಸುನೀಲ ದಳವಾಯಿ, ಸದಸ್ಯರಾದ ಗಂಗಪ್ಪ ಮುನವಳ್ಳಿ, ಶಿವಾಜಿ ಖೇಮಜಿ, ಬಂಗಾರೆವ್ವ ಅಲಾಬದಿ, ಮೌಲಾಲಿ ಯಕ್ಕುಂಡಿ, ಅಶ್ವಿನಿ ಖೇಮಜಿ, ಸುನಿತಾ ಕಲಾರಕೊಪ್ಪ, ಇನಾಯತಲಿ ಅತ್ತಾರ, ಮಹಾದೇವಿ ಶೀಗಿಹಳ್ಳಿ, ಭೀಮಪ್ಪ ಪೂಜೇರ, ಸಂತೋಷ ಬಂದವ್ವಗೋಳ, ಮಲ್ಲವ್ವ ಕೋಲಕಾರ, ಮಹಾದೇವಿ ಕೋಲಕಾರ ಇತರರಿದ್ದರು.

ಕುಕಡೊಳ್ಳಿ ಪ್ರೌಢಶಾಲೆ ಉದ್ಘಾಟನೆ ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದಲ್ಲಿ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಸೋಮವಾರ ಉದ್ಘಾಟಿಸಿದ ಸಚಿವೆ ಲಕ್ಷ್ಮೀ  ಹೆಬ್ಬಾಳ್ಕರ್​ ಬಳಿಕ ಮಾತನಾಡಿ, 1.25 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ದೇವತೆ ದೇವಸ್ಥಾನ ನಿರ್ಮಾಣಕ್ಕೆ ಶ್ರೀ ಶಂಕುಸ್ಥಾಪನೆ ಮಾಡಲಾಗುವುದು. ಕ್ಷೇತ್ರದಲ್ಲಿ ಪ್ರೌಢ ಶಾಲೆಗಳಿಗೆ ಬಹಳ ಕಡೆ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಇತರ ಕಡೆಗೂ ಪ್ರೌಢಶಾಲೆ ನೀಡಲಾಗುವುದು ಎಂದು ಭರವಸೆ ನೀಡಿದರು. ಗ್ರಾಪಂ ಅಧ್ಯೆ ಸಿದ್ದವ್ವ ಹೊಸೂರ, ಬಿಇಒ ಆರ್​.ಕೆ. ಆಂಜನೇಯ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್​.ಮೇದಾರ, ಎಸ್​ಡಿಎಂಸಿ ಅಧ್ಯ ಮಂಜುನಾಥ ಹುಬ್ಬಳ್ಳಿ, ಪ್ರವಿಣ ರೊಟ್ಟಿ, ನಾಗಪ್ಪ ಕರವಿನಕೊಪ್ಪ ಇತರರಿದ್ದರು.