ಜಿಲ್ಲೆ

ಹೃದಯಾಘಾತದಿಂದ ಶಿಕ್ಷಕ ಸಾವು

ಕಕ್ಕೇರಿ: ಸಮೀಪದ ಭೂರವಕಿ ಸರ್ಕಾರಿ ಮರಾಠಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕನ್ನಡ ಶಿಕ್ಷಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಕಕ್ಕೇರಿ ಗ್ರಾಮದ ಉದಯ ಮುಶಪ್ಪ ವನ್ನೂರ (54) ಮೃತಪಟ್ಟ ಶಿಕ್ಷಕ

ಗುರುವಾರ ಶಾಲೆಯಲ್ಲಿ ಸೇವೆ ನಿರ್ವಹಿಸುವ ವೇಳೆ ಮಧ್ಯಾಹ್ನ ಮನೆಯಿಂದ ತಂದ ಬುತ್ತಿಯ ಊಟ ಮಾಡಿ ಕೈ ತೊಳೆದುಕೊಂಡು ವಿಶ್ರಾಂತಿ ಪಡೆಯುವಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕಕ್ಕೇರಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಚಿಕಿತ್ಸೆ ಕೊಡುವಷ್ಟರಲ್ಲಿಯೇ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಶಿಕ್ಷಕನಿಗೆ ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧು-ಬಳಗ ಇದೆ.