ಚಿಕ್ಕಬಳ್ಳಾಪುರ: ನಗರ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ಥಳಿಯ ಆಡಳಿತ ಸಂಸ್ಥೆಗಳು ಕರ ವಸೂಲಿಯಲ್ಲಿ ಹಿಂದೆ ಬಿದ್ದಿದ್ದು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಅನುದಾನವನ್ನು ನೆಚ್ಚಿಕೊಳ್ಳುವಂತಾಗಿದೆ.
ಹೌದು! ಹಿಂದೆ ಕೋಟ್ಯಂತರ ರೂ ಲೆಕ್ಕದಲ್ಲಿ ಸಂಗ್ರಹವಾಗುತ್ತಿದ್ದ ತೆರಿಗೆ ಪ್ರಮಾಣವು ಲಾಂತರ ರೂಗಳಿಗೆ ಇಳಿದಿದೆ. ಇದಕ್ಕೆ ಸಿಬ್ಬಂದಿ ಕೊರತೆ, ಕೆಲವರ ಹೊಂದಾಣಿಕೆ ಸೇರಿದಂತೆ ನಾನಾ ಕುಂಟು ನೆಪಗಳನ್ನು ಹೇಳಲಾಗುತ್ತಿದೆ. ಇದರ ಬಗ್ಗೆ ಸ್ವತ@ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ತ್ವರಿತವಾಗಿ ಬಾಕಿ ಇರುವ ತೆರಿಗೆ ಹಣವನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ 4 ನಗರಸಭೆ, 1 ಪಟ್ಟಣ ಪಂಚಾಯಿತಿ ಮತ್ತು 1 ಪುರಸಭೆ ಸೇರಿದಂತೆ ಸ್ಥಳಿಯ ಆಡಳಿತ ಸಂಸ್ಥೆಗಳಿದ್ದು 158 ವಾರ್ಡುಗಳಿವೆ. ಇಲ್ಲಿ ವಾಣಿಜ್ಯ ವಹಿವಾಟು, ಆಸ್ತಿ ಮತ್ತು ಕಟ್ಟಡಗಳು, ಸೇವಾ ಚಟುವಟಿಕೆ ಸೇರಿದಂತೆ ವಿವಿಧ ತೆರಿಗೆ ಹಣವು ಕೋಟ್ಯಂತರ ರೂ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಸಾಧನೆಯು ತುಂಬಾ ಕಳಪೆಯಾಗಿದೆ.
*ಆಡಳಿತ ಸಂಸ್ಥೆಗಳಲ್ಲಿ ಕಡಿಮೆ ಸಾಧನೆ
ಶಿಡ್ಲಘಟ್ಟ ನಗರಸಭೆಯಲ್ಲಿ 4 ಲಕ್ಷ, ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ 2.5 ಲಕ್ಷ, ಬಾಗೇಪಲ್ಲಿ ಪುರಸಭೆ 3.5 ಲಕ್ಷ, ಗೌರಿಬಿದನೂರು ನಗರಸಭೆಯಲ್ಲಿ 40 ಲಕ್ಷ ರೂ, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 1.5 ಕೋಟಿ ಹಾಗೂ ಚಿಂತಾಮಣಿ ನಗರಸಭೆಯಲ್ಲಿ 2.5 ಕೋಟಿ ಕರ ವಸೂಲಿಯಾಗಿದ್ದು ಖಾತೆಯಲ್ಲಿನ ಕಡಿಮೆ ಅನುದಾನವು ವಿವಿಧ ಅಭಿವೃದ್ಧಿ ಕೆಲಸಗಳಿಗೆ ತೊಡಕಾಗಿದ್ದು ಸರ್ಕಾರವನ್ನು ನೆಚ್ಚಿಕೊಳ್ಳುವಂತಾಗಿದೆ.
*ಸಚಿವರ ಬಹಿರಂಗ ಅಸಮಾಧಾನ
ಈ ಹಿಂದೆ ಜಿಲ್ಲಾಡಳಿತಕ್ಕೆ ತೆರಿಗೆ ಆಂದೋಲನ ಕೈಗೊಳ್ಳಲು, ಕಾಲ ಕಾಲಕ್ಕೆ ಪ್ರಗತಿಯ ವಿಮರ್ಶೆಗೆ ಸಚಿವ ಡಾ ಎಂ.ಸಿ.ಸುಧಾಕರ್ ಸೂಚಿಸಿದ್ದರು. ಇದರ ನಡುವೆಯೂ ಉತ್ತಮ ಸಾಧನೆ ಕಂಡು ಬಂದಿಲ್ಲ. ಆಯಾ ಸ್ಥಳಿಯ ಆಡಳಿತ ಸಂಸ್ಥೆಗಳಲ್ಲಿನ ಅಧಿಕಾರಿಗಳನ್ನೊಳಗೊಂಡಂತೆ ಸಭೆಯನ್ನು ಕೈಗೊಂಡು, ಮಾರ್ಗದರ್ಶನ ನೀಡಿದ್ದರೂ ರ್ನಿಲಸಲಾಗಿದೆ. ಕರ ವಸೂಲಿಗಾರರು ಆಯಾ ವ್ಯಾಪ್ತಿಯಲ್ಲಿ ನಿರೀೆಗೆ ಅನುಗುಣವಾಗಿ ಹಣ ಸಂಗ್ರಹಕ್ಕೆ ಮುಂದಾಗುತ್ತಿಲ್ಲ. ಇದಕ್ಕೆ ಒಂದು ತಿಂಗಳಲ್ಲಿ ಬಾಕಿ ಉಳಿದಿರುವ ತೆರಿಗೆ ಹಣದ ವಸೂಲಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.