ಜಿಲ್ಲೆ

ಸರ್ಕಾರದ ಸಹಾಯ ಧನಕ್ಕೆ ಅಕೌಂಟ್ ದಾಖಲೆ ನೀಡಿ

Belagavi

ಬೆಳಗಾವಿ: ಕರೊನಾ ಹಿನ್ನೆಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ 1,000 ರೂ.ಗಳ ಸಹಾಯ ಧನ ನೀಡುವುದಾಗಿ ಸರ್ಕಾರ ಘೋಷಿಸಿದ್ದು, ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆ ವಿವರ ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 16,900 ಕಾರ್ಮಿಕರ ಖಾತೆಗೆ 1,000 ರೂ. ಪಾವತಿ ಮಾಡಲು ಕೆನರಾ ಬ್ಯಾಂಕ್‌ಗೆ ಸೂಚಿಸಲಾಗಿದೆ. ಉಳಿದ ಕಾರ್ಮಿಕರು ತಮ್ಮ ತಾಲೂಕು ವ್ಯಾಪ್ತಿಯ ಕಾರ್ಮಿಕ ಇಲಾಖೆಯ ನಿರೀಕ್ಷಕರ ಮೊಬೈಲ್‌ಗೆ ಅಕೌಂಟ್ ದಾಖಲೆ, ನೋಂದಣಿ ಚೀಟಿಯನ್ನು ವಾಟ್ಸ್‌ಆ್ಯಪ್ ಮಾಡಲು ಸೂಚಿಸಲಾಗಿದೆ.

ಬೈಲಹೊಂಗಲ ಮತ್ತು ಖಾನಾಪುರ ವೃತ್ತದ ಕಾರ್ಮಿಕ ನಿರೀಕ್ಷಕ ಮೊ.9901198804, ಸವದತ್ತಿ ಮತ್ತು ರಾಮದುರ್ಗ ವೃತ್ತ ಕಾರ್ಮಿಕ ನಿರೀಕ್ಷಕ ಮೊ.7022054094, ಗೋಕಾಕ ಮತ್ತು ರಾಯಬಾಗ ವೃತ್ತ ಕಾರ್ಮಿಕ ನಿರೀಕ್ಷಕ ಮೊ. 9845251545, ಚಿಕ್ಕೋಡಿ, ಹುಕ್ಕೇರಿ ಮತ್ತು ನಿಪ್ಪಾಣಿ ವೃತ್ತ ಕಾರ್ಮಿಕ ನಿರೀಕ್ಷಕ ಮೊ. 9900428760, ಅಥಣಿ ವೃತ್ತ ಕಾರ್ಮಿಕ ನಿರೀಕ್ಷಕ ಮೊ. 9743508295 ಸಂಖ್ಯೆಗಳಿಗೆ ದಾಖಲೆ ವಾಟ್ಸ್ ಆ್ಯಪ್ ಮಾಡಬೇಕು.

ನೋಂದಾಯಿತ ಕಾರ್ಮಿಕ ಸಂಘದ ಪದಾಧಿಕಾರಿಗಳು ತಮ್ಮ ಸಂಘಟಣೆಯಿಂದ ನೋಂದಾಯಿಸಿದ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳನ್ನು ಲೀಸ್ಟ್ ಮಾಡಿ ಹಿರಿಯ ಕಾರ್ಮಿಕ ನಿರೀಕ್ಷಕರ, ಕಾರ್ಮಿಕ ನಿರೀಕ್ಷಕರ ಕಚೇರಿಗೆ ಸಲ್ಲಿಸಬೇಕು ಎಂದು ಬೆಳಗಾವಿ ಉಪ ವಿಭಾಗ-1 ಮತ್ತು ಉಪ ವಿಭಾಗ-2ರ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.