ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿಯಲ್ಲಿ ಶುಕ್ರವಾರ ಆರೋಗ್ಯ ಉಚಿತ ಶಿಬಿರ ನಡೆಯಿತು. ಪ್ರಯೋಗ ತಜ್ಞ ಯಲ್ಲಮ್ಮ, ಆರೋಗ್ಯ ಕೇಂದ್ರದ ಸಹಾಯಕಿ ಮೊದಿನಬಿ, ಆಶಾ ಕಾರ್ಯಕರ್ತೆಯರಾದ ದೇವಮ್ಮ, ಹನುಮಂತಮ್ಮ ಇದ್ದರು. 
ಜಿಲ್ಲೆ

ಸರ್ಕಾರಿ ಆರೋಗ್ಯ ಸೇವೆ ಸದ್ಬಳಕೆ ಮಾಡಿಕೊಳ್ಳಿ

ಸಿಂಧನೂರು: ಸರ್ಕಾರ 2030ರೊಳಗಾಗಿ ಎಚ್‌ಐವಿಮುಕ್ತ ಭಾರತ ನಿರ್ಮಿಸಲು ರೂಪಿಸಿರುವ ಯೋಜನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ನಾಗರಾಜ ಹೇಳಿದರು.


ತಾಲೂಕಿನ ಕೆ.ಹೊಸಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ಷನ್‌ಮತ್ತು ಸೆಂಟ್ ಲುಕ್ ಮೆಡಿಕಲ್ ಸೊಸೈಟಿ, ಸಂಪರ್ಕ ಕಾರ್ಯಕರ್ತ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು. ಹಳ್ಳಿಗಳಲ್ಲಿ ಅಪಾಯಕಾರಿ ನಡವಳಿಕೆಯುಳ್ಳ ಜನರನ್ನು ಪತ್ತೆ ಹಚ್ಚಿ ಹೆಚ್‌ಐವಿ, ರಕ್ತ ತಪಾಸಣೆಗೆ ಮಾಡಿಸಲಾಗುತ್ತಿದೆ. ಜತೆಗೆ ಸರ್ಕಾರದ ಇತರ ಆರೋಗ್ಯ ಸೇವೆಗಳಿಗೆ ಲಿಂಕ ಮಾಡಿಸಲಾಗುತ್ತದೆ ಎಂದರು.


ಆರೋಗ್ಯ ಕೇಂದ್ರದ ಸಹಾಯಕಿ ಮೊದಿನಬಿ ಮಾತನಾಡಿದರು. ಬಿಪಿ, ಶುಗರ್, ಕ್ಷಯರೋಗ, ರಕ್ತದ ಹಿಮೋಗ್ಲೋಬಿನ ತಪಾಸಣೆ ಮಾಡಲಾಯಿತು. ಪ್ರಯೋಗ ತಜ್ಞ ಯಲ್ಲಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ ಅಮರೇಶ ಕಲ್ಮಂಗಿ, ವಲಯ ಮೇಲ್ವಿಚಾರಕ ರಾಯಪ್ಪ, ಶಿಕ್ಷಕರಾದ ಹುಸೇನ್ ಸಾಬ್, ದೊಡ್ಡಪ್ಪ, ಛತ್ರಪ್ಪ, ಕಲ್ಲನಗೌಡ, ಕ್ಲಸ್ಟರ್ ಇನ್ ಕರ್ಕ್ ಬಾನೂಬೀ, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಂಕ್ರಪ್ಪ ಹುಲ್ಲೂರು, ಚನ್ನಪ್ಪ, ರಮೇಶ, ಅಂಗನವಾಡಿ ಕಾರ್ಯಕರ್ತರಾದ ರಂಜಾನ್ ಬೀ, ಶಂಕ್ರಮ್ಮ, ಮಗ್ಗೆಮ್ಮ, ಸುನಿತಾ ಇದ್ದರು.