ಜಿಲ್ಲೆ

ಸುಪ್ರೀಂ ತೀರ್ಪು ರದ್ದುಗೊಳಿಸಿ

ಬೆಳಗಾವಿ: ಸರ್ಕಾರಿ ನೌಕರರ ಬಡ್ತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ಅಖಿಲ ಭಾರತೀಯ ಮಜ್ದೂರ್ ಕಾಂಗ್ರೆಸ್‌ನ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಸರ್ಕಾರಿ ನೌಕರರ ಬಡ್ತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರದ್ದುಗೊಳಿಸಬೇಕು. ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿ, ಎಸ್‌ಟಿ ನೌಕರರಿಗೆ ಅನ್ಯಾಯವಾಗಿದೆ. ಹಾಗಾಗಿ ಈ ಕುರಿತು ರಾಷ್ಟ್ರಪತಿ ಅವರು ಕೋರ್ಟ್ ತೀರ್ಪು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ತೀರ್ಪು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಜನರು ದುಃಖಿತರಾಗಿದ್ದೇವೆ. ರಾಷ್ಟ್ರಪತಿಗಳಿಗಿರುವ ವಿಶೇಷ ಹಕ್ಕನ್ನು ಬಳಸಿಕೊಂಡು ಸಂವಿಧಾನದ ಕಾನೂನು 16 (4)ನ್ನು ರಕ್ಷಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಮಲ್ಲೇಶ ಚೌಗಲೆ, ಮೋಹನ ಹಾನಗಲ್ಲ, ಯಲ್ಲೇಶ ಚೌಗಲೆ, ದಯಾನಂದ ಚೌಗಲೆ, ಮನೋಹರ ಇನ್ನಿತರರು ಇದ್ದರು.