ಜಿಲ್ಲೆ

ಬೈಕ್​ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾದ ಸಾರಿಗೆ ಬಸ್​

ಧಾರವಾಡ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿ ಪ್ರಯಾಣಿಕರು ತುಂಬಿದ್ದ ಸಾರಿಗೆ ಸಂಸ್ಥೆ ಬಸ್ ಪಲ್ಟಿ ಹೊಡೆದು ಬಿದ್ದಿರುವ ಘಟನೆ ನಡೆದಿದೆ. ನವಲಗುಂದದಿಂದ ಗದಗಕ್ಕೆ ಹೊರಟಿದ್ದ ಬಸ್​, ಚಾಲಕನು ಎದುರಿಗೆ ಬಂದ ಬೈಕಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದಾಗ ಪಲ್ಟಿಯಾಗಿ ರಸ್ತೆ ಬದಿಗೆ ಬಿದ್ದಿದೆ.

40 ಜನರು ಪ್ರಯಾಣ ಮಾಡುತ್ತಿದ್ದ ಈ ಬಸ್​​ನಲ್ಲಿದ್ದ ಆರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದ ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಅಣ್ಣಿಗೇರಿ ಪೊಲೀಸರು ತಿಳಿಸಿದ್ದಾರೆ.