ಜಿಲ್ಲೆ

ಎನ್.ಸಿ.ಸಿ.: ರಾಷ್ಟ್ರಮಟ್ಟದಲ್ಲಿ ಗೌತಮಿ ಪೂಜಾರಿ ಸಾಧನೆ

Mangaluru - Hariprasad Rai

ಮಂಗಳೂರು : ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ, ಎನ್.ಸಿ.ಸಿ. ಭೂದಳದ ಗೌತಮಿ ಪೂಜಾರಿ ಕೇರಳದ ತಿರುವನಂತಪುರದಲ್ಲಿ ನಡೆದ ಅಖಿಲ ಭಾರತ ಮಟ್ಟದ ಕ್ರೀಡಾ ಶೂಟಿಂಗ್ ಸ್ಪರ್ಧೆಯಲ್ಲಿ ಎನ್.ಸಿ.ಸಿ.ಕರ್ನಾಟಕ ಮತ್ತು ಗೋವಾ
ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದಾರೆ. ಇವರು ಪ್ರತಿನಿಧಿಸಿದ ತಂಡ ಇಂಟರ್ ಡೈರಕ್ಟರೇಟ್ ಸ್ಪೋರ್ಟ್ಸ್ ಶೂಟಿಂಗ್ ಕಾಂಪಿಟೀಶನ್‌ನಲ್ಲಿ ಪ್ರಥಮ ಸ್ಥಾನ ಪಡೆದಿದೆ. ವಿಜೇತ ತಂಡವನ್ನು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇತ್ತೀಚೆಗೆ ರಾಜಭವನದಲ್ಲಿ ಅಭಿನಂದಿಸಿದರು.