ಜಿಲ್ಲೆ

ಸಾಧನೆಗೆ ತಾಯಿಯೇ ಪ್ರೇರಕ ಶಕ್ತಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಜಾಲ ಧಾರವಾಡ

ಸಾಧನೆಗೆ ತಾಯಿಯೇ ಪ್ರೇರಕ ಶಕ್ತಿ. ಅವಳು ಶಕ್ತಿ ತುಂಬುವ ಚೈತನ್ಯ ಸ್ವರೂಪಿ. ಕುಟುಂಬದ ಒಳಿತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ತ್ಯಾಗಮಯಿ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿ ಅಂಗವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ `ಶ್ರಮಿಕ ಮಹಿಳೆ' ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸಿದ್ಧಪಡಿಸುವ ಗೃಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಶಕ್ತಿ ತುಂಬಿದ0ತಾಗುತ್ತದೆ ಎಂದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜ್ಯೋತಿ `ಸ್ವ ಅರಿವು ಇಂದಿನ ಅಗತ್ಯತೆ' ವಿಷಯ ಕುರಿತು ಉಪನ್ಯಾಸ ನೀಡಿ, ಆಡಂಬರದ ಮದುವೆಗೆ ದುಂದು ವೆಚ್ಚ ಮಾಡುವ ಬದಲು ಮಗಳಿಗೆ ಶಿಕ್ಷಣ ನೀಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಾವೇರಿಯ ಸಾಮಾಜಿಕ ಹೋರಾಟಗಾರ್ತಿ ನಿಂಗಮ್ಮ ಸವಣೂರ ಅವರಿಗೆ `ಶ್ರಮಿಕ ಮಹಿಳೆ- 2025' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಆರ್.ಸಿ. ಹಲಗತ್ತಿ ದತ್ತಿದಾನಿಗಳ ಪರವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪರಿಚಯಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಡಾ. ಶ್ರೀಶೈಲ ಹುದ್ದಾರ, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಧನವಂತ ಹಾಜವಗೋಳ, ಡಾ. ಸದಾಶಿವ ಮರ್ಜಿ, ವೀರಣ್ಣ ಪತ್ತಾರ, ಎಸ್.ಜಿ. ಪಾಟೀಲ, ಬಿ.ಎಸ್. ಶಿರೋಳ, ಪಾರ್ವತಿ ಹಾಲಭಾವಿ, ಇತರರಿದ್ದರು.