ಜಿಲ್ಲೆ

ಗೌಂಡಿ ಕೆಲಸದಲ್ಲಿದ್ದ ವ್ಯಕ್ತಿ ಸಾವು, ಪ್ರಕರಣ ದಾಖಲು

Haveri - Kariyappa Aralikatti

ಬ್ಯಾಡಗಿ: ಗೌಂಡಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿ ಆತನ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ಇಲ್ಲಿಯ ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಸವಂತಪುರ ತಾಲೂಕಿನ ಸುರುನಾಯ್ಕ ತಾಂಡಾದ ಆಕಾಶ ದೇವದಾಸ ಪವಾರ (29) ಮೃತ ವ್ಯಕ್ತಿ.

ಈತ ಇಲ್ಲಿಯ ರಾಜಕುಮಾರ ಎಂಬ ಗುತ್ತಿಗೆದಾರನ ಬಳಿ 6 ತಿಂಗಳಿಂದ ಕೆಲಸ ಮಾಡಿಕೊಂಡಿದ್ದ. ಆದರೆ, ರಾಜಕುಮಾರ ಫೋನ್​ ಮಾಡಿ ನಿಮ್ಮ ಮಗ ಕೆಲಸದ ಮೇಲೆ ಮೃತಪಟ್ಟಿದ್ದಾನೆ ಎಂದು ತಿಳಿಸಿದಾಗ ಬಂದು ನೋಡಿದರೆ ಆತನ ತಲೆ ಹಿಂದೆ ರಕ್ತ ಬಿದ್ದಿದೆ. ರಕ್ತಸ್ರಾವ ಮತ್ತು ತಲೆ ಒಡೆದಿದೆ. ಆದ್ದರಿಂದ ಆತನ ಸಾವಿನಲ್ಲಿ ಅನುಮಾನವಿದ್ದು ಈ ಕುರಿತು ತನಿಖೆ ನಡೆಸಬೇಕು ಎಂದು ಮೃತನ ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.