ಹಳಿಯಾಳ: ಭಾಗವತಿ ಗ್ರಾಮದ ಧನಗರ ಗೌಳಿ ಸಂಸ್ಕೃತಿ ರಕ್ಷಣಾ ಸಮಿತಿಯಿಂದ 12 ಧರನಗರ ಗೌಳಿ ಗ್ರಾಮಗಳ ಸಹಯೋಗದಲ್ಲಿ ಧನಗಳ ಗೌಳಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಎರಡು ದಿನಗಳ ಈ ಉತ್ಸವದಲ್ಲಿ ಕಾರ್ಯಕ್ರಮದಲ್ಲಿ ಸಮುದಾಯದ ದಸರಾ ಆಚರಣೆಗೆ ಸಂಬAಽಸಿದ ವಿವಿಧ ಸ್ಪರ್ಧೆಗಳು, ಸಾಂಪ್ರದಾಯಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಗೌಳಿ ಸಂಪ್ರದಾಯದAತೆ ಭಂಡಾರ ಹಚ್ಚಿ, ಪಗೋಟಾ(ಆಯರ್) ತೊಡಿಸಿ ಸ್ವಾಗತಿಸಲಾಯಿತು. ಗೌಳಿ ಸಾಂಪ್ರದಾಯಿಕ ಪ್ರಾರ್ಥನೆ `ಜಾಬ್' ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
12 ಗ್ರಾಮಗಳ ಮಹಿಳಾ ತಂಡಗಳು ಜಾನಪದ ಹಾಡುಗಳನ್ನು ಹಾಡಿ ಗಮನ ಸೆಳೆದವು. ಎಲ್ಲ ಗ್ರಾಮಗಳ ಗಜ ನೃತ್ಯ ತಂಡಗಳು ಪಹೋಟಾ, ಜಗ್ಗಾ, ದೋತಾರ್ ವೇಷ ಭೂಷಣದಲ್ಲಿ ಗಮನ ಸೆಳೆದವು. ಡೋಲು, ಡಪ್ ತಾಳ ಮುರಳಿ ನುಡಿಸುತ್ತ `ಹರ್, ಹರ್ ಚಾಂಗ್ಬಾಲಾ' ಎಂಬ ಘೋಷಣೆ ಕೂಗಿ ಗಮನ ಸೆಳೆದರು. ಕಿರಿಯ ಹೆಣ್ಣು ಮಕ್ಕಳು ಪುಗಡಿ ನೃತ್ಯ ಪ್ರದರ್ಶಿಸಿದರು.
ಉತ್ಸವದಲ್ಲಿ ಕೊಳಲು ಊದುವ ಸ್ಪರ್ಧೆ, ಪಗೋಟಾ ಸುತ್ತುವ ಸ್ಪರ್ಧೆ, ಆರತಿ ಪದಗಳನ್ನು ಹೇಳುವ ಸ್ಪರ್ಧೆ, ದುಡಗ್ಯಾಚ ಗೀತ ಸ್ಪರ್ಧೆ, ಶಿಳುಕ್ ಸ್ಪರ್ಧೆ, ವೇಶಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದಲ್ಲದೇ ನಶಿಸುತ್ತಿರುವ ಗೌಳಿ ಸಂಸ್ಕೃತಿ ರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ, ರಂಗೋಲಿ, ಭಾಷಣೆ ಸ್ಪರ್ಧೆಗಳು ನಡೆದವು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಗಳಲ್ಲಿ ಉತ್ತಮ ಅಂಕ ಗಳಿಸಿದ 80 ಕ್ಕೂ ಅಽಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಜ್ಯ ಮಟ್ಟದ ಜಾನಪದ ಕಲಾ ಪ್ರದರ್ಶನದಲ್ಲಿ ಪಾಲ್ಗೊಂಡ ಧನಗರ ಗೌಳಿ ನೃತ್ಯ ತಂಡದ ಸದಸ್ಯರನ್ನು ಗೌರವಿಸಲಾಯಿತು.