ಉಡುಪಿ: ಬಹುತೇಕ ನಾಡಿನೆಲ್ಲೆಡೆ ಒಳ್ಳೆಯ ಮಳೆಯಾಗಿ ಪ್ರಕೃತಿ ಹಸಿರಿನಿಂದ ಮೈದುಂಬಿಕೊಂಡಿದೆ . ಶಾಲೆ ಕಚೇರಿಗಳ ಆವರಣ ತೋಟಗಳು , ರಸ್ತೆ ಬದಿಗಳಲ್ಲೂ ಸಮೃದ್ಧ ಹಸಿರು ಹುಲ್ಲು ಬೆಳೆದಿದೆ . ಈ ಹುಲ್ಲನ್ನು ಊರಿನ ಸಂಘಟನೆಗಳು ಯುವಕ ಮಂಡಲಗಳು ಸ್ವಯಂಸೇವಾ ಸಂಸ್ಥೆ , ಭಜನಾ ಮಂಡಳಿಗಳ ಸದಸ್ಯರು ವಾರಕ್ಕೊಂದು ದಿನ ಶ್ರಮದಾನದ ಮೂಲಕ ಕಟಾವ್ ಮಾಡಿ ಸಮೀಪದ ಗೋಶಾಲೆಗಳು , ಮಠ ದೇವಸ್ಥಾನಗಳಲ್ಲಿರುವ ಹಸುಗಳಿಗೆ ನೀಡಬಹುದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದ್ದಾರೆ.
ರಸ್ತೆಬದಿಯ ಅಥವಾ ತೋಟ ಇತ್ಯಾದಿಗಳ ಸ್ವಚ್ಛತೆಯೂ ಆಗುತ್ತದೆ. ಜೊತೆಗೆ ಗೋಶಾಲೆಗಳ ಗೋವುಗಳಿಗೆ ಸಮೃದ್ಧ ಹಸಿರು ಹುಲ್ಲು ಒದಗಿಸಿದ ಪುಣ್ಯವೂ ನಮ್ಮದಾಗುತ್ತದೆ ಎಂದ ಶ್ರೀಗಳು , ಈಗಾಗಲೇ ಕೆಲವು ಕಡೆಗಳಲ್ಲಿ ಗೋವಿಗಾಗಿ ಮೇವು ಅಭಿಯಾನ ನಡೆಯುತ್ತಿವೆ . ಗೋರಕ್ಷಣೆಯ ಕಾರ್ಯದಲ್ಲಿ ಈ ಮೂಲಕವೂ ಎಲ್ಲರೂ ತೊಡಗಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.