ರಂಗಾಯಣ ಅಂಗಳದ ಭೂಮಿಗೀತ ರಂಗವೇದಿಕೆಯಲ್ಲಿ ಏ.7 ರಂದು ಸಂಜೆ 6.30ಕ್ಕೆ ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ನಾಟಕ ಪ್ರದರ್ಶನಗೊಳ್ಳಲಿದೆ.
ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಂಗಾಯಣ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಬಂಜಾರ ಜನಾಂಗದ ಸಂತೋಷ, ಸುಖ-ದುಃಖ, ಚರಿತ್ರೆಯಲ್ಲಿ ಇವರ ಬದುಕು ಹೇಗೆ ದುರಂತಮಯವಾಗಿದೆ ಎಂಬುದನ್ನು ನಾಟಕ ರೂಪದಲ್ಲಿ ಕಟ್ಟಿಕೊಡಲಾಗಿದೆ.