ಗೊರೇಬಾಳ ಸಮೀಪದ ಸಾಲಗುಂದಾ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾರ್ಮಿಕರು ಕೇಕ್ ಕತ್ತರಿಸಿ ಮಹಿಳಾ ದಿನ ಆಚರಿಸಿದರು. 
ಜಿಲ್ಲೆ

ರಾಜಕೀಯದಲ್ಲೂ ಮೇರು ಸ್ಥಾನ

ಗೊರೇಬಾಳ: ಸಾಲಗುಂದಾ ಗ್ರಾಪಂ ವ್ಯಾಪ್ತಿಯಲ್ಲಿ ಗೋ ಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಗೊರೇಬಾಳ ಕ್ಯಾಂಪ್‌ನ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಕೇಕ್ ಕತ್ತರಿಸುವ ಮೂಲಕ ಬುಧವಾರ ಮಹಿಳಾ ದಿನವನ್ನು ಆಚರಿಸಿದರು.

ತಾಂತ್ರಿಕ ಸಹಾಯಕಿ ರತ್ನಮ್ಮ ಮಾತನಾಡಿ, ಪುರುಷರಿಗೆ ಸಮನಾಗಿ ದುಡಿಯುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ರಾಜಕೀಯದಲ್ಲೂ ಮೇರು ಸ್ಥಾನದಲ್ಲಿದ್ದು, ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಹಿಳೆಯರು ಉನ್ನತ ಸ್ಥಾನದಲ್ಲಿದ್ದು, ಘನತೆ ಮೆರೆದಿದ್ದಾರೆ ಎಂದರು.