ಗೊರೇಬಾಳ: ಈ ಭಾಗದ ಜನರ ಬಹುದಿನದ ಕನಸನ್ನು ಈಡೇರಿಸುವಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ, ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಅವರು ಶ್ರಮಿಸಿದ್ದಾರೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ ಹೇಳಿದರು.
ಗೊರೇಬಾಳ ಕ್ಯಾಂಪ್‌ನಿಂದ ರೈಲ್ವೆ ನಿಲ್ದಾಣ ಸಂಪರ್ಕಿಸುವ ಮುಖ್ಯ ರಸ್ತೆ ಹಾಗೂ ಸೇತುವೆ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 1.6 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುಣಮಟ್ಟದಿಂದ ನಿರ್ಮಾಣ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಗೊರೇಬಾಳ ಗ್ರಾಪಂ ಅಧ್ಯಕ್ಷೆ ಬಸಮ್ಮ ಅಶೋಕ ಮ್ಯಾಗಳಮನೆ, ಮಾಜಿ ಸದಸ್ಯ ಗಾರಪಾಟಿ ವೆಂಕಟರಾವ್, ಗ್ಯಾರಂಟಿ ಯೋಜನೆ ಸದಸ್ಯ ಬಸವರಾಜ ಗೌಡ, ಪ್ರಮುಖರಾದ ಎಂ.ರಂಗನಗೌಡ ಗೊರೇಬಾಳ, ಆರ್.ಪಾಲಾಕ್ಷ ಗೌಡ, ರಾಮಣ್ಣ ಸಾಸಲಮರಿ, ರಂಗಾರೆಡ್ಡಿ ಸಾಸಲಮರಿ, ಎನ್.ವೆಂಕಣ್ಣ ಗೊರೇಬಾಳ ಕ್ಯಾಂಪ್, ಎಂ.ಲಕ್ಷ್ಮಣರಾವ್ ಮೂಡ್ಲಿಗಿರಿ ಕ್ಯಾಂಪ್, ತೇಲು ವೆಂಕಟೇಶ್ವರರಾವ್, ಡಾ.ಕೆ.ವಿ.ಹೂಗಾರ್, ರಾಮಸ್ವಾಮಿ, ಟಿ.ಹಾಲಪ್ಪ ರಾಮಬಾಬು, ಶಿವಪ್ಪ ಹಾಲಾಪುರ ಇತರರಿದ್ದರು.