ಗೊರೇಬಾಳ ಸಮೀಪದ ಹಂಚಿನಾಳ ಕ್ಯಾಂಪ್‌ನ ವಿವಿಧೊದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ರಸಗೊಬ್ಬರ ಪಡೆದುಕೊಳ್ಳುತ್ತಿರುವುದು. 
ಜಿಲ್ಲೆ

ಒಂದೇ ಚೀಲ ರಸಗೊಬ್ಬರ ವಿತರಣೆಯಿಂದ ಸಮಸ್ಯೆ

ಶ್ರೀನಾಥ

ಗೊರೇಬಾಳ: ಆಧಾರ್‌ಕಾರ್ಡ್‌ಗೆ ಒಂದೇ ರಸಗೊಬ್ಬರ ಚೀಲ ನೀಡುತ್ತಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ.

ಒಬ್ಬ ರೈತನ ಆಧಾರ್‌ಕಾರ್ಡ್‌ಗೆ ಒಂದು ಚೀಲ ರಸಗೊಬ್ಬರ ನೀಡುವುದು ಸರಿಯಲ್ಲ.

ಜಮೀನುಗಳ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ನೀಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದರು.

ವಿವಿಧೊದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಶಾಂತಕುಮಾರ ಮಾತನಾಡಿ, ಸಂಘ ರೈತರ ಹಿತ ಕಾಯುವಲ್ಲಿ ಪರಿಶ್ರಮಿಸಿದೆ. ನಮಗೆ ದೊರಕಿದ ಗೊಬ್ಬರವನ್ನು ಎಲ್ಲ ರೈತರಿಗೆ ತಲುಪಿಸಲಾಗಿದೆ ಎಂದರು.