ಗೊರೇಬಾಳ: ಗ್ರಾಮದ ಮೂರನೇ ವಾರ್ಡಿನಲ್ಲಿರುವ ನಾಗಪ್ಪನ ಕಟ್ಟೆ ಸಮುದಾಯ ಭವನದಲ್ಲಿ ಭೋವಿ ಯುವಕ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ಭಾನುವಾರ ಸಂಜೆ ಜರುಗಿತು.
ಬೆಳಗ್ಗೆ ವಿಘ್ನ ನಿವಾರಕ ಗಣೇಶನಿಗೆ ಭಕ್ತರಿಂದ ಪೂಜೆ ನೆರವೇರಿತು. ಕಡುಬು, ಚಿತ್ರಾನ್ನ, ಬದನೆಯಕಾಯಿ ಪಲ್ಯ, ಅನ್ನ, ಸಾಂಬಾರ, ಮಜ್ಜಿಗೆಯ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಕಳಸ, ಬಾಜಾ-ಭಜಂತ್ರಿ, ಡಿಜೆಯೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ರಾತ್ರಿ ಗಣೇಶ ವಿಸರ್ಜನೆ ಮಾಡಲಾಯಿತು. ಒಂದನೇ ವಾರ್ಡಿನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆಯೂ ಜರುಗಿತು. ಮೆರವಣಿಗೆಯಲ್ಲಿ ಯುವಕರು ಕೋಲಾಟ ಪ್ರದರ್ಶನ ನೀಡಿದರು. ಕೆಂಚಮ್ಮ ಗುಡಿ ಹತ್ತಿರ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಕೂಡ ವಿಸರ್ಜಿಸಲಾಯಿತು.