ಗೊರೇಬಾಳ ಬಿ.ಆರ್.ಅಂಬೇಡ್ಕರ್(ಪರಿಶಿಷ್ಟ ಜಾತಿ) ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಬಿಇಒ ಬಸವಲಿಂಗಪ್ಪ ಹುಡೇದ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಎಂ.ಲಕ್ಷ್ಮಣ ರಾವ್, ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಆರ್.ಬಸನಗೌಡ, ಪ್ರಮುಖರಾದ ಎನ್. ಸಣ್ಣಭೀಮನಗೌಡ, ಎನ್.ಸಿದ್ದಲಿಂಗೇಶ ಗೌಡ ಇನ್ನಿತರರಿದ್ದರು. 
ಜಿಲ್ಲೆ

ಪಠ್ಯದೊಂದಿಗೆ ಕ್ರೀಡೆಗೆ ಆದ್ಯತೆ ನೀಡಿ

ಗೊರೇಬಾಳ: ಕ್ರೀಡಾಕೂಟ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಸದೃಢ ಹಾಗೂ ಛಲ ನೀಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹುಡೇದ್ ಹೇಳಿದರು.

ಗ್ರಾಮದ ಅಂಬೇಡ್ಕರ್(ಪರಿಶಿಷ್ಟ ಜಾತಿ) ವಸತಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಗೊರೇಬಾಳ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಕಲಿಕೆಯೊಂದಿಗೆ ಕ್ರೀಡೆಗಳು ಅಗತ್ಯ. ಆದ್ದರಿಂದ ಆಟೋಟಗಳಿಗೂ ಆದ್ಯತೆ ನೀಡಬೇಕು ಎಂದರು.

ಪ್ರಾಚಾರ್ಯ ಕಾಳಿಂಗಪ್ಪ ಮಾತನಾಡಿ, ಗೊರೇಬಾಳ ವಲಯ ಮಟ್ಟದಲ್ಲಿ ಒಟ್ಟು 13 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಮಕ್ಕಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಲಿ ಎಂದು ಹೇಳಿದರು. ಗ್ರಾಮದ ಮುಖಂಡ ಎನ್.ಸಿದ್ದಲಿಂಗೇಶ ಗೌಡ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಎಂ.ಲಕ್ಷ್ಮಣರಾವ್, ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಆರ್.ಬಸನಗೌಡ, ನಿರ್ದೇಶಕರಾದ ಎಂ.ಬಸನಗೌಡ, ಶರಣೇಗೌಡ ಪೊಪಾ, ಶರಣಪ್ಪ ನಾಯಕ್, ಜಂಬಯ್ಯ ಮಾಸನುರ, ಟಿ.ದೇವೇಂದ್ರಗೌಡ, ಬಸನಗೌಡ ಮಾಲಿಪಾಟೀಲ್ ಮಲ್ಕಪುರ, ಶಿವರಾಜ ಮಾವಿನಮಡಗು, ಮುಖ್ಯ ಶಿಕ್ಷಕ ಸಂಗಮೇಶ್ವರ್ ಮಲ್ಕಪುರ, ಪ್ರಮುಖರಾದ ಎನ್. ಸಣ್ಣಭೀಮನಗೌಡ, ಎನ್.ಸಿದ್ದಲಿಂಗೇಶ ಗೌಡ, ಅಯ್ಯಪ್ಪ ಮುಕ್ಕುಂದ, ನಾಗನಗೌಡ ರೌಡಕುಂದ, ಮಂಜುನಾಥ ಸಾಲಗುಂದ, ಬಸವರಾಜ ಜಾಲಿಹಾಳ, ಸುಬ್ಬಲಕ್ಷ್ಮೀ, ವಿಠ್ಠಲ್, ಶಿವಶಂಕರ, ಸೋಮಲಿಂಗಪ್ಪ, ಆರೋಗ್ಯ ಇಲಾಖೆ ಚಾಂದಪಾಷ, ಅಂಬಮ್ಮ, ಆಶಾಕಾರ್ಯಕರ್ತೆ ಶಶಿಕಲಾ ಇತರರಿದ್ದರು.