ಕೊರಟಗೆರೆ: ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸಮೀಪ ಎಂಎಸ್‌ಐಎಲ್ ಮದ್ಯದಂಗಡಿ ತೆರವು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂರ್ಷ ಸಮಿತಿ ನೇತೃತ್ವದಲ್ಲಿ ನೂರಾರು ಮಂದಿ ಗುರುವಾರ ಪ್ರತಿಭಟನೆ ನಡೆಸಿದರು.
ನಿತ್ಯ ನೂರಾರು ಭಕ್ತರು ಭೇಟಿ ನೀಡುವ ದೇವಸ್ಥಾನದಿಂದ 500 ಮೀಟರ್‌ಗಳ ದೂರದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ ಎಂದು ದಲಿತ ಸಂರ್ಷ ಸಮಿತಿ ತಾಲೂಕು ಸಂಚಾಲಕ ಎಚ್.ಸಿ. ದೊಡ್ಡಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಅಂಗಡಿ ಸಮೀಪ ದೇವಾಲಯ ಟ್ರಸ್ಟ್ ನಡೆಸುತ್ತಿರುವ ಶಾಲಾ ಕಾಲೇಜುಗಳಿವೆ. ಹಾಗಾಗಿ ಶ್ರೀ ಈ ಮದ್ಯದಂಗಡಿ ತೆರೆವುಗೊಳಿಸಬೇಕು ಎಂದು ಒತ್ತಾಯಿಸಿದರು. ನಂತರ ಅಬಕಾರಿ ನಿರೀಕ್ಷಕಿ ಶ್ರೀಲತಾಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂರ್ಷ ಸಮಿತಿ ಸಂಟನಾ ಸಂಚಾಲಕರಾದ ಡಿ.ಎಲ್.ಶಿವರಾಮ್, ವಿ.ವೀರಕ್ಯಾತರಾಯ, ಎಂ.ಎನ್.ನಾಗರಾಜು, ಹನುಮಯ್ಯ, ಅಶ್ವತ್ಥಯ್ಯ, ದೊಡ್ಡಯ್ಯ ಮತ್ತಿತರರು ಇದ್ದರು. ಕೊರಟಗೆರೆ ಸಿಪಿಐ ನದಾಫ್, ಕೋಳಾಲ ಪಿಎಸ್‌ಐ ನವೀನ್‌ಕುವಾರ್ ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಅಬಕಾರಿ ಉಪ ನಿರೀಕ್ಷಕರಾದ ವೈಷ್ಣವಿ, ಕುಲಕರ್ಣಿ ಇದ್ದರು.
ಗ್ರಾಮಸ್ಥರು ಮತ್ತು ದಲಿತ ಸಂಟನೆಯಿಂದ ಮದ್ಯದಂಗಡಿ ತೆರವಿಗೆ ಮನವಿ ಸಲ್ಲಿಸಿದ್ದು, ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುದು. ಶ್ರೀವೇ ಇದಕ್ಕೊಂದು ಪರಿಹಾರ ಕಲ್ಪಿಸುತ್ತೇವೆ. ಶ್ರೀಲತಾ, ಅಬಕಾರಿ ನಿರೀಕ್ಷಕಿ, ಕೊರಟಗೆರೆ. ಶಾಂತಿಯುತ ಪ್ರತಿಭಟನೆ ವಾಡಿದ್ದೇವೆ. ಒಂದು ವೇಳೆ ಇಲಾಖೆ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ವಾಡುತ್ತೇವೆ. ಎಚ್‌ಸಿ ದೊಡ್ಡಯ್ಯ , ತಾಲೂಕು ಸಂಚಾಲಕ, ಕರ್ನಾಟಕ ದಲಿತ ಸಂರ್ಷ ಸಮಿತಿ, ಕೊರಟಗೆರೆ