ಉಡುಪಿ: ಯಕ್ಷಗಾನದ ಹಿರಿಯ ಕಲಾವಿದ, ಮದ್ದಳೆ ಮಾಂತ್ರಿಕ ಹಿರಿಯಡಕ ಗೋಪಾಲ ರಾವ್ (101) ಶನಿವಾರ ನಿಧನರಾದರು.
ಬಡಗುತಿಟ್ಟು ಯಕ್ಷಗಾನ ಹಿಮ್ಮೇಳದ ಯಕ್ಷಶಿಕ್ಷಕ ಗೋಪಾಲ ರಾಯರಿಗೆ ಮದ್ದಳೆಯ ಮಾಂತ್ರಿಕ ಎಂಬುದು ಬಿರುದು. ಮಹಾನ್ ಮದ್ದಳೆಗಾರರಾಗಿದ್ದ ಅವರು 16ನೇ ವಯಸ್ಸಿನಲ್ಲಿ ಶೇಷಗಿರಿ ರಾವ್ ಅವರಿಂದ ಮದ್ದಳೆ ಅಭ್ಯಾಸ ಮಾಡಿ, 1936ರಲ್ಲಿ ಹಿರಿಯಡ್ಕ ಮೇಳದಲ್ಲಿ ಉಪಮದ್ದಳೆಗಾರರಾಗಿ ವೃತ್ತಿ ರಂಗಕ್ಕೆ ಪಾದಾರ್ಪಣೆ ಮಾಡಿದರು. ಪೆರ್ಡೂರು ಹಾಗೂ ಮಂದಾರ್ತಿ ಮೇಳದ ಪ್ರಧಾನ ಮದ್ದಳೆಗಾರರಾಗಿ ಕಾರ್ಯನಿರ್ವಹಿಸಿದ್ದರು.