ನುಗ್ಗೇಹಳ್ಳಿ: ಹೋಬಳಿಯ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಲ್ಕೆರೆ ಗ್ರಾಮದ ಕೆ.ಆರ್. ಗೋಪಾಲಗೌಡ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ರಂಗಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೆ.ಆರ್. ಗೋಪಾಲಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಗೋಪಾಲಗೌಡ ಅವರನ್ನು ಚುನಾವಣಾ ಅಧಿಕಾರಿ ವಾಸಿಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.
ಕಾರ್ಯನಿರ್ವಣಾಧಿಕಾರಿ ಕೆ.ಶರ್ಮ, ಉಪಾಧ್ಯಕ್ಷ ಸುಬ್ಬಶೆಟ್ಟಿ, ಮುಖಂಡ ಎಸ್.ಎಂ.ಸಾತೇನಹಳ್ಳಿ, ರಾಮಕೃಷ್ಣೇಗೌಡ ಕಲ್ಕೆರೆ ಕೆ.ಎನ್.ಅಶೋಕ್, ದೇವಿಗೆರೆ ಕುಮಾರ್, ಕೆ.ಎನ್.ಭಾಗ್ಯಮ್ಮ, ಸಾತೇನಹಳ್ಳಿ ಹೊಂಬೆಗೌಡ (ಕುಮಾರ್), ಕಲ್ಕೆರೆ ಮಂಜೇಗೌಡ, ಅಯ್ಯರಳ್ಳಿ ಮರಿಗೌಡ (ರಮೇಶ್), ಪಿ.ಕೆ.ಪುಷ್ಪಾ ರಮೇಶ್, ದೇವಿಗೆರೆ ಡಿ.ಸಿ. ರಮೇಶ್, ಎಚ್.ಎನ್. ಸಂತೋಷ್ ಕುಮಾರ್, ಇ.ಶಿವಣ್ಣ, ಶಕುಂತಲಾ, ಪ್ರಮೋದ್, ಜಗದೀಶ್ ಗೌಡ ಇದ್ದರು.