ಕಂಪಲಾಪುರ ಕೊಪ್ಪಲು ಡೇರಿಗೆ ಗೋಪಾಲ್ ಅಧ್ಯಕ್ಷ 
ಜಿಲ್ಲೆ

ಕಂಪಲಾಪುರ ಕೊಪ್ಪಲು ಡೇರಿಗೆ ಗೋಪಾಲ್ ಅಧ್ಯಕ್ಷ

ಕಂಪಲಾಪುರ: ಕಂಪಲಾಪುರ ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಗೋಪಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಚಂದ್ರು ಆಂತರಿಕ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಫೆ.26ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಗೋಪಾಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಜೆ.ಹಿತೇಂದ್ರ ಆವಿರೋಧ ಆಯ್ಕೆ ಘೋಷಿಸಿದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಲೋಕೇಶ್, ಉಪಾಧ್ಯಕ್ಷೆ ಶೀಲಾ, ನಿರ್ದೇಶಕರಾದ ಕೆ.ಎಂ.ಲಕ್ಷ್ಮಣ್ ಚಂದ್ರು, ಗಿರೀಶ್, ಸದಾನಂದ, ಸಿದ್ದಪ್ಪ, ಗೀತಾ ಹಾಜರಿದ್ದರು.