ಜಿಲ್ಲೆ

ಅಧ್ಯಕ್ಷರಾಗಿ ಗೋಪಾಲ ಮಡಿವಾಳ ಆಯ್ಕೆ

ಇಂದಿರಾ ಎನ್ ಕೆ

ಕೋಟ: ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಆಡಳಿತ ಮಂಡಳಿಗೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದ್ದು, ಸಮಿತಿ ಅಧ್ಯಕ್ಷರಾಗಿ ಗೋಪಾಲ ಮಡಿವಾಳ, ಕಾರ್ಯದರ್ಶಿಯಾಗಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿಯಾಗಿ ಕಮಲ ಮಡಿವಾಳ, ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸುಧಾಕರ ಭಟ್, ವಿಠಲ ಐರೋಡಿ, ಆಶಾ ಕುಲಾಲ್, ಕಮಲ ಗಣೇಶ ಐರೋಡಿ, ಗೋಪಾಲ ಮಡಿವಾಳ, ವಿಜಯ ಪೂಜಾರಿ ಗೋಳಿಬೆಟ್ಟು, ಎಚ್.ಕರುಣಾಕರ ಶೆಟ್ಟಿ, ಜಯಚಂದ್ರ ಆಚಾರ್ಯ, ಬಾಲಕೃಷ್ಣ ಪೂಜಾರಿ ಸಾಸ್ತಾನ ಆಯ್ಕೆಯಾಗಿದ್ದಾರೆ.