ಜಿಲ್ಲೆ

ಸದ್ಭಾವನಾ ದಿನಾಚರಣೆ, ಪ್ರತಿಜ್ಞಾವಿಧಿ ಸ್ವೀಕಾರ

ರವಿ ಎಸ್. ಬಳೂಟಗಿ

ನರೇಗಲ್ಲ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸದ್ಭಾವನೆಯೊಂದಿಗೆ ಇರುವಂತರಾಗಬೇಕು. ದೇಶದ ಹಿತಕ್ಕಾಗಿ ಸಂವಿಧಾನಾತ್ಮಕ ಕ್ರಮಗಳ ಮೂಲಕ ಸಮಾಜಮುಖಿಯಾಗಬೇಕು ಎಂದು ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು. ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿ, ಹಲವಾರು ಮತಪಂಥಗಳು, ಜಾತಿ ಮತ್ತು ಧರ್ಮಗಳನ್ನೊಳಗೊಂಡಿರುವ ಭಾರತ ಇಡೀ ವಿಶ್ವದಲ್ಲಿಯೇ ಮಾನವೀಯ ಮೌಲ್ಯಗಳನ್ನು ಬಳಸಿಕೊಂಡು ಬೆಳವಣಿಗೆಯಲ್ಲಿ ಮಂಚೂಣಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿರುವ ಆತ್ಮಸ್ಥೈರ್ಯ ಮತ್ತು ಶಾಂತಿಯುತ, ಎಲ್ಲ್ಲ ಧರ್ಮ, ಭಾಷೆ ಹಾಗೂ ಜನರಲ್ಲಿ ಸೌಹಾರ್ದ ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆ ಮೂಡಿಸಿ ಹಿಂಸಾಚಾರ ತ್ಯಜಿಸುವಂತೆ ಮಾಡುವುದು ಸದ್ಭಾವನಾ ದಿನದ ಉದ್ದೇಶವಾಗಿದೆೆ ಎಂದರು. ಎಂ.ಎಚ್. ಸೀತಿಮನಿ, ರಮೇಶ ಹಲಗಿಯವರ, ಅಡಿವೆಪ್ಪ ಮೆಣಸಿಗಿ, ರಕ್ಷತ್‌ಎಲ್., ಮಣಿಕಂಠ ಹೂಗಾರ, ಶೇಖಪ್ಪ ಹೊನವಾಡ, ಉದಯ ಮುದೇನಗುಡಿ, ವಿವೇಕ ಅಣಗೌಡ್ರ, ಮಹಾದೇವ ಮ್ಯಾಗೇರಿ, ದುರಗಪ್ಪ ಪಾದಗಟ್ಟಿ, ಮಲ್ಲಯ್ಯ ಹಿರೇವಡೆಯರ, ರವಿ ನಡುವಲಕೆರಿ, ಎನ್.ಬಿ. ಬೇಲೇರಿ, ಕಾವ್ಯಾ ಅರವಟಗಿಮಠ, ನೀಲಪ್ಪ ಚಳ್ಳಮರದ, ಜಮೀಲಾಬೇಗಂ ಬಂಕಾಪೂರ, ಇತರರಿದ್ದರು.