ಬೆಳಗಾವಿ: ಇಲ್ಲಿನ ವನಿತಾ ವಿದ್ಯಾಲಯ ಶಾಲೆಯ ಸಮೀಪ ಸಿಪಿಇಡಿ ಮೈದಾನ ಮುಂಭಾಗದಲ್ಲಿ ಶುಕ್ರವಾರ ಚಲಿಸುತ್ತಿದ್ದ ಗೂಡ್ಸ್ ವಾಹನ ಮೇಲೆ ಮರ ಉರುಳಿ ಬಿದ್ದಿದೆ. ಬೈಲಹೊಂಗಲದಿಂದ ಬೆಳಗಾವಿಗೆ ವಸ್ತು ಸಾಗಿಸುತ್ತಿದ್ದ ವಾಹನದ ಮೇಲೆ ಶಾಲೆಯ ಗೇಟ್ ಬಳಿ ಮರ ಏಕಾಏಕಿ ಉರುಳಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ವಾಹನ ನಜ್ಜುಗುಜ್ಜಾಗಿದೆ. ಘಟನೆಯಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿ ಜನರು ಸಮಸ್ಯೆ ಎದುರಿಸಬೇಕಾಯಿತು.