ಹಿರೇಕೆರೂರ: ಗೂಡ್ಸ್ ವಾಹನದ ಮೇಲೆ ಕುಳಿತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೋಡ ಗ್ರಾಮದ ಬಳಿ ಗುರುವಾರ ನಡೆದಿದೆ.
ಪಟ್ಟಣದ ಕುಂಬಾರ ನಗರದ ಅಶೋಕ ಈಶಪ್ಪ ಕುಬಸದ (52) ಮೃತ ವ್ಯಕ್ತಿ.
ಇವರು ಗೂಡ್ಸ್ ವಾಹನದಲ್ಲಿ ಕಿರಾಣಿ ಸಾಮಗ್ರಿಗಳ ಮೇಲೆ ಕುಳಿತ್ತಿದ್ದರು. ವಾಹನದ ಚಾಲಕ ಅಡ್ಡಾತಿಡ್ಡಿಯಾಗಿ ವಾಹನ ಓಡಿಸಿದ್ದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.