ಜಿಲ್ಲೆ

ಡಿವೈಡರ್ ಹಾರಿ ಗೂಡ್ಸ್ ವಾಹನ ಡಿಕ್ಕಿ

ಪ್ರಸಿನ್ ಕೆ.ಆರ್

ನಾಗಮಂಗಲ: ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಗೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಪ್ರಕರಣ ಸೋಮವಾರ ರಾತ್ರಿ ನಡೆದಿದೆ.

ಮೇಘಾಲಯ ಮೂಲದ ಕೂಲಿ ಕಾರ್ಮಿಕ ಗಣೇಶ್ (25) ಮೃತ. ನಾಗಮಂಗಲ ಪಟ್ಟಣದಿಂದ ಟಿಬಿ ಬಡಾವಣೆ ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ.

ಗೂಡ್ಸ್ ವಾಹನ ವೇಗವಾಗಿ ಬಂದು ಡಿವೈಡರ್ ಹಾರಿದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿ ನಂತರ ರಸ್ತೆ ಬದಿ ನಿಂತಿದ್ದ ಕಾರುಗಳು ಹಾಗೂ ಬೈಕ್‌ಗಳಿಗೂ ಗುದ್ದಿದ್ದು ಕೆಲವು ವಾಹನಗಳು ಜಖಂಗೊಂಡಿವೆ. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗೂಡ್ಸ್ ವಾಹನ ಚಾಲಕ ತಲೆಮರೆಸಿಕೊಂಡಿದ್ದು, ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಮಿಕ ಗಣೇಶ್ ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

ಸ್ಥಳಕ್ಕೆ ನಾಗಮಂಗಲ ಪಟ್ಟಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.